ಮುಂಬೈ: 50ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಕರೆ ಬಂದಿರುವ ಘಟನೆ ನಡೆದಿದೆ.
ಮುಂಬೈನಲ್ಲಿನ ಜಸ್ಲೋಕ್ ಆಸ್ಪತ್ರೆ, ರಹೇಜಾ ಆಸ್ಪತ್ರೆ, ಸೆವೆನ್ ಹಿಲ್ಸ್ ಆಸ್ಪತ್ರೆ, ಕೊಹಿನೂರ್ ಆಸ್ಪತ್ರೆ, ಕೆಇಎಂ ಆಸ್ಪತ್ರೆ, ಜೆಜೆ ಆಸ್ಪತ್ರೆ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆ ಸೇರಿದಂತೆ 50ಕ್ಕೂ ಅಧಿಕ ಆಸ್ಪತ್ರೆಗಳಿಗೆ (Mumbai Hospitals) ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು (Bomb Threat) ಬಂದಿವೆ.
ದುಷ್ಕರ್ಮಿಗಳು ವಿಪಿಎನ್ ನೆಟ್ ವರ್ಕ್ ಬಳಸಿ ಬೆದರಿಕೆ ಇಮೇಲ್ ಗಳನ್ನು ಕಳುಹಿಸಿದ್ದಾರ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇಮೇಲ್ ಕಳುಹಿಸಿದವರ ಗುರುತು ಮತ್ತು ಬೆದರಿಕೆಯ ಉದ್ದೇಶ ಇನ್ನೂ ಬಹಿರಂಗವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೇ, ಹಿಂದೂಜಾ ಕಾಲೇಜ್ ಆಫ್ ಕಾಮರ್ಸ್ ಅನ್ನು ಸ್ಫೋಟಿಸುವ ಕುರಿತು ಕೂಡ ಇಮೇಲ್ ಬಂದಿದೆ ಎನ್ನಲಾಗಿದೆ. ಪೊಲೀಸ್ ತಂಡಗಳು ಮತ್ತು ಬಾಂಬ್ ಸ್ಕ್ವಾಡ್ ಎರಡೂ ಸ್ಥಳಗಳಲ್ಲಿ ಸಂಪೂರ್ಣ ಶೋಧ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಹೀಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆಯಂತಹ ಕರೆ ಹಾಗೂ ಇಮೇಲ್ ಗಳನ್ನು ಮಾಡುತ್ತಲೇ ಇದ್ದಾರೆ.
