ಬಳ್ಳಾರಿ: ಬೆಂಕಿ ಅವಘಡವೊಂದರಲ್ಲಿ 40ಕ್ಕೂ ಅಧಿಕ ಕುರಿಗಳು ಜೀವಂತ ಸುಟ್ಟು ಹೋಗಿರುವ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ (Vijayanagara) ಜಿಲ್ಲೆಯ ಕೂಡ್ಲಿಗಿಯ ಅಮಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುರಿ ಶೆಡ್ ಗೆ ಆಕಸ್ಮಿಕವಾಗಿ ಬೆಂಕಿ (fire Accident) ತಗುಲಿದ ಪರಿಣಾಮ 40ಕ್ಕೂ ಅಧಿಕ ಕುರಿಗಳು ಸಜೀವ ದಹನವಾಗಿವೆ.
ಶೇಖರಪ್ಪ ಅಗಸರ ಎಂಬ ರೈತರಿಗೆ ಸೇರಿದ್ದ ಕಣಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಣಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಣದ ಪಕ್ಕದಲ್ಲಿದ್ದ ಕುರಿಗಳನ್ನು ಕಟ್ಟಿ ಹಾಕಿದ್ದ ಶೆಡ್ ಗೂ ಬೆಂಕಿ ತಗುಲಿದೆ. ಆದರೆ, ಈ ಸಮಯದಲ್ಲಿ ಯಾರೂ ಇಲ್ಲದ್ದರಿಂದಾಗಿ ಎಲ್ಲ ಕುರಿಗಳು ಸುಟ್ಟು ಹೋಗಿವೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರೂ ಕುರಿಗಳನ್ನು ಬದುಕಿಸಲು ಸಾಧ್ಯವಾಗಿಲ್ಲ. 4 ಲಕ್ಷ ರೂ.ಗೂ ಅಧಿಕ ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡು ರೈತ ಕಣ್ಣೀರು ಸುರಿಸುತ್ತಿದ್ದಾರೆ.