ನವದೆಹಲಿ: ಭಾರತೀಯ ವಾಹಕಗಳ ಹಿಡಿತದಲ್ಲಿರುವ 25ಕ್ಕೂ ಅಧಿಕ ದೇಶೀಯ ಹಾಗೂ ವಿಮಾನಗಳಿಗೆ ಬಾಂಬ್ ಬೆದರಿಕೆಯ ಕರೆ ಬಂದಿದೆ.
ಈ ಕುರಿತು ಪಿಟಿಐ ವರದಿ ಮಾಡಿದ್ದು, ಇಂಡಿಗೋ, ವಿಸ್ತಾರಾ ಮತ್ತು ಸ್ಪೈಸ್ ಜೆಟ್ ನ ತಲಾ 7 ವಿಮಾನಗಳಿಗೆ ಬೆದರಿಕೆಗಳು ಬಂದಿದ್ದರೆ, ಏರ್ ಇಂಡಿಯಾದ 6 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿವೆ. ಇಂಡಿಗೋದ 7 ವಿಮಾನಗಳು (ಕೋಝಿಕೋಡ್ನಿಂದ ದಮ್ಮಾಮ್), (ಉದಯಪುರದಿಂದ ದೆಹಲಿ), (ದೆಹಲಿಯಿಂದ ಇಸ್ತಾಂಬುಲ್), (ಜೆಡ್ಡಾದಿಂದ ಮುಂಬೈ), (ಮುಂಬೈನಿಂದ ಇಸ್ತಾನ್ಬುಲ್), (ಹೈದರಾಬಾದ್ನಿಂದ ಚಂಡೀಗಢ) ಮತ್ತು (ಪುಣೆಯಿಂದ ಜೋಧಪುರ) ವಿಮಾನಗಳಿಗೆ ಬೆದರಿಕೆಯ ಕರೆ ಬಂದಿವೆ.
ವರದಿಯಂತೆ, ವಿಸ್ತಾರಾ ಮತ್ತು ಇಂಡಿಗೋದ ತಲಾ ಸುಮಾರು 20 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿವೆ. ಆಕಾಶ್ ಏರ್ಲೈನ್ಸ್ನ 13 ವಿಮಾನ, ಅಲಯನ್ಸ್ ಏರ್ ಮತ್ತು ಸ್ಪೈಸ್ಜೆಟ್ನ ತಲಾ 5 ವಿಮಾನಗಳಿಗೆ ಬೆದರಿಕೆಗಳು ಬಂದಿವೆ. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು, ಸಂದೇಶಗಳ ಮೂಲ ಅಥವಾ ಒಳಗೊಂಡಿರುವವರ ಗುರುತುಗಳ ಬಗ್ಗೆ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ.