ಬೆಂಗಳೂರ: ರಾಜ್ಯದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಸರ್ಕಾರವು ತೆರಿಗೆ ಸಂಗ್ರಹಣೆಯನ್ನು ಹೆಚ್ಚು ಸರಳೀಕರಣ ಮಾಡಲು ಮುಂದಾಗಿದೆ.
ವಾಣಿಜ್ಯ ತೆರಿಗೆ ಮತ್ತು ಜಿಎಸ್‌ಟಿ ಆದಾಯ
ರಾಜ್ಯವು ದೇಶದ ಎರಡನೇ ಅತಿದೊಡ್ಡ ಜಿಎಸ್‌ಟಿ ಆದಾಯ ಸಂಗ್ರಹಿಸುವ ರಾಜ್ಯವಾಗಿದೆ. 2024-25 ನೇ ಸಾಲಿನಲ್ಲಿ 1,05,000 ಕೋಟಿ ರೂಪಾಯಿ ಆದಾಯ ಸಂಗ್ರಹ ನಿರೀಕ್ಷಿಸಲಾಗಿತ್ತು. 2025-26 ಆರ್ಥಿಕ ವರ್ಷದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಆದಾಯ ಗುರಿ 1,20,000 ಕೋಟಿ ರೂಪಾಯಿ ಎಂದು ನಿಗದಿಯಾಗಿದೆ.
ವೃತ್ತಿಪರ ತೆರಿಗೆ ಪರಿಷ್ಕರಣೆ
ವೃತ್ತಿಪರ ತೆರಿಗೆ ಕಾಯ್ದೆ ತಿದ್ದುಪಡಿಯಾಗಿದ್ದು, ಜುಲೈ ಮತ್ತು ಫೆಬ್ರವರಿ ತಿಂಗಳಲ್ಲಿ ವೇತನ ಗಳಿಕೆದಾರರು ಪಾವತಿಸಬೇಕಾದ ತೆರಿಗೆಯನ್ನು 200 ರೂಪಾಯಿಂದ 300 ರೂಪಾಯಿಗೆ ಹೆಚ್ಚಿಸಲಾಗಿದೆ.
ಅಬಕಾರಿ ಸುಂಕ ಪರಿಷ್ಕರಣೆ
ಆಬಕಾರಿ ತೆರಿಗೆ ಪಾವತಿಯನ್ನು ಹೊಂದಿಕೆ ಮಾಡಲಾಗಿದೆ. ಪ್ರೀಮಿಯಂ ಮದ್ಯದ ಬೆಲೆಗಳನ್ನು ಪಕ್ಕದ ರಾಜ್ಯಗಳೊಂದಿಗೆ ಹೊಂದಿಸಲು ಕ್ರಮ ಕೈಗೊಳ್ಳಲಾಗಿದೆ. ಮದ್ಯ ಪರವಾನಗಿ ಹಂಚಿಕೆಯ ಪ್ರಕ್ರಿಯೆಯನ್ನು ಪರಿಷ್ಕರಿಸಿ, ಪಾರದರ್ಶಕ ಇ-ಹರಾಜು ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. 2025-26 ನೇ ಸಾಲಿನ ಆಬಕಾರಿ ಆದಾಯ ಗುರಿ ,000 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. 2024-25ರ ಸಾಲಿನಲ್ಲಿ, 500 ಕೋಟಿ ರೂ. ಆದಾಯ ಸಂಗ್ರಹ ನಿಗದ ಮಾಡಲಾಗಿತ್ತು.
ಆಸ್ತಿ ನೋಂದಣಿ ಮತ್ತು ಮುುದ್ರಾಂಕ ಶುಲ್ಕ
ಆಸ್ತಿ ನೋಂದಣಿ ಪ್ರಕ್ರಿಯೆ ಸುಗಮಗೊಳಿಸಲು ಇ-ಖಾತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ನೋಂದಾಯಿಸಲು ಅಗತ್ಯವಿಲ್ಲದ ದಾಖಲೆಗಳಿಗೆ ಡಿಜಿಟಲ್ ಇ-ಸ್ಟಾಂಪಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ.
ಮೋಟಾರು ವಾಹನ ಮತ್ತು ಸಾರಿಗೆ ತೆರಿಗೆ
ಸಾರಿಗೆ ಇಲಾಖೆ 2025-26 ನೇ ಸಾಲಿಗೆ 15,000 ಕೋಟಿ ಆದಾಯ ಸಂಗ್ರಹ ಗುರಿ ಹೊಂದಿದೆ, ಇದು 2024-25 ನೇ ಸಾಲಿನ ₹12,500 ಕೋಟಿಯಿಂದ ಹೆಚ್ಚಳ.
ಖನಿಜ ಮತ್ತು ಭೂವಿಜ್ಞಾನ ತೆರಿಗೆ
ಖನಿಜ ಮತ್ತು ಭೂವಿಜ್ಞಾನ ಇಲಾಖೆ ಮೂಲಕ 9,000 ಕೋಟಿ ರೂಪಾಯಿ ಆದಾಯ ಸಂಗ್ರಹ ನಿರೀಕ್ಷೆ ಮಾಡಲಾಗಿದೆ. ಇದಕ್ಕೆ ಮೆರುಗು ನೀಡಲು ಮಹತ್ವದ ಖನಿಜಗಳ ಮೇಲಿನ ಹೊಸ ತೆರಿಗೆ ಪರಿಚಯಿಸಲಾಗಿದೆ ಇದು ಸುಪ್ರೀಂ ಕೋರ್ಟ್ ತೀರ್ಪಿನ ಮೇರೆಗೆ ಜಾರಿಗೆ ತರಲಾಗಿದೆ.