ಐಪಿಎಲ್ -18 ರಲ್ಲಿ ಈ ಬಾರಿ ಹೆಚ್ಚಿನ ಪಂದ್ಯಗಳು ಜರುಗಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
2022 ರಲ್ಲಿ ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟದ ಸಂದರ್ಭದಲ್ಲಿ 2025ರಿಂದ ಪಂದ್ಯಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಬಿಸಿಸಿಐ ಹೇಳಿತ್ತು. ಹೀಗಾಗಿ ಈ ಬಾರಿಯಿಂದ ಹೆಚ್ಚಿನ ಪಂದ್ಯಗಳು ನಡೆಯಲಿವೆ ಎನ್ನಲಾಗುತ್ತಿದೆ. ಈ ವರ್ಷದಿಂದ 74 ಪಂದ್ಯಗಳ ಬದಲಿಗೆ 84 ಪಂದ್ಯಗಳು ನಡೆಯಲಿವೆ ಎನ್ನಲಾಗುತ್ತಿದೆ.
ಆದರೆ, ಇನ್ನೊಂದು ಮಾಹಿತಿಯಂತೆ ಬಿಸಿಸಿಐ ಇಷ್ಟೊಂದು ಪಂದ್ಯ ನಡೆಸುವುದಿಲ್ಲ ಎನ್ನಲಾಗುತ್ತಿದೆ. ಬಿಸಿಸಿಐ ಈ ಮಹತ್ವದ ನಿರ್ಧಾರದಿಂದ ಹಿಂದೆ ಸರಿದಿದೆ. ಕೆಲಸಗಾರರಿಗೆ ಹೆಚ್ಚಿನ ಒತ್ತಡವಾಗುತ್ತದೆ ಎಂಬ ಕಾರಣಕ್ಕೆ ಬಿಸಿಸಿಐ 10 ಪಂದ್ಯಗಳ ಹೆಚ್ಚಳದ ನಿರ್ಧಾರದಿಂದ ಹಿಂದೆ ಸರಿಯುತ್ತಿದೆ ಎನ್ನಲಾಗುತ್ತಿದೆ.
ಹೀಗಾಗಿ ಈ ಬಾರಿ ಕೂಡ ಐಪಿಎಲ್ ನಲ್ಲಿ ಪ್ಲೇ ಆಫ್ ಸೇರಿದಂತೆ ಒಟ್ಟು 74 ಪಂದ್ಯಗಳೇ ನಡೆಯಬಹುದು ಎನ್ನಲಾಗುತ್ತಿದೆ. ಆದರೆ, ಐಪಿಎಲ್ 2025 ರಲ್ಲಿ ಒಟ್ಟು 84 ಪಂದ್ಯ ಆಡುವ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ. 2027 ರಲ್ಲಿ ಈ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲು ಸಜ್ಜಾಗಿದೆ. ಆದರೆ, ಈ ವರ್ಷ ನಿರ್ಧಾರದಿಂದ ಹಿಂದೆ ಸರಿದಿದೆ. ಆದರೂ ಐಪಿಎಲ್ ಅಧಿಕೃತವಾಗಿ ಈ ಮಾಹಿತಿ ಹೇಳಿಲ್ಲ. ಅಂತಿಮ ನಿರ್ಧಾರ ಯಾವ ರೀತಿ ಇರುತ್ತದೆ ಕಾಯ್ದು ನೋಡಬೇಕಿದೆ.