ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲ್ ನಲ್ಲಿ ಕೈದಿಗಳು ಐಷಾರಾಮಿ ಬದುಕು ಸಾಗಿಸುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದ್ದವು. ಹೀಗಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಈ ಮಧ್ಯೆ ಈಗ ಮತ್ತಷ್ಟು ಕರ್ಮಕಾಂಡಗಳು ವೈರಲ್ ಆಗಿವೆ.
ಜೈಲಿನಲ್ಲೇ ಕೈದಿಗಳು ಸೇರಿಕೊಂಡು ಎಣ್ಣೆ ಪಾರ್ಟಿ ಮಾಡುತ್ತಿರುವ ವೀಡಿಯೋ ವೈರಲ್ ಆಗಿವೆ. ಐಷಾರಾಮಿ ಜೀವನ ಸಾಗಿಸುವುದಕ್ಕಾಗಿ ಪೊಲೀಸರನ್ನೇ ಯಾಮಾರಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಶಂಕಿತ ಉಗ್ರ ಜುಲ್ಫಿಕರ್, ಶಿವಮೊಗ್ಗ ರೌಡಿಶೀಟರ್ ಬಚ್ಚನ್ ಸೇರಿದಂತೆ 6 ಜನ ಕೈದಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಿದ ಬೆನ್ನಲ್ಲೇ ಮತ್ತಷ್ಟು ವೀಡಿಯೋ ವೈರಲ್ ಆಗಿವೆ.
ಜೈಲು ಮುಖ್ಯ ಅಧೀಕ್ಷಕಿಗೆ ಹಣ ನೀಡುವ ವಿಷಯಗಳು ಕೂಡ ಬಹಿರಂಗವಾಗಿವೆ. ಅ.14 ರಂದು ಜೈಲು ಮುಖ್ಯ ಅಧೀಕ್ಷಕಿಯಾಗಿ ಡಾ.ಅನಿತಾ ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ ಅವರು ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಂದಿದ್ದರು. ಆದರೆ, ಅಂದೇ ವಿಡಿಯೋ ಮಾಡಿ ಕೈದಿಗಳು ವೈರಲ್ ಮಾಡಿದ್ದಾರೆ. ಅಂದರೆ, ಜೈಲು ಅಧೀಕ್ಷಕಿಯನ್ನೇ ಟಾರ್ಗೆಟ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.