ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣವೊಂದು ನಡೆದಿದೆ. ಹಿಂದೂ ವ್ಯಕ್ತಿ ಹಾಗೂ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಣತಾಲದಲ್ಲಿ ವೈರಲ್ ಆಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ತಾಮಸಂದ್ರ ಗ್ರಾಮದಲ್ಲಿ ನಡೆದಿದೆ.
ಮಹೇಶ್ ಹಾಗೂ ಹಸೀನಾ ಬಾನು ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ.
ಮಹೇಶ್ ಹಾಗೂ ಹಸೀನಾ ಬಾನು ನಡುವೆ ಆಕ್ರಮ ಸಂಬಂಧವಿದೆ ಎಂದು ಆರೋಪಿಸಿ, ಈ ವಿಚಾರ ತಿಳಿದು ತಾಮಸಂದ್ರ ಗ್ರಾಮಕ್ಕೆ ಕಾರಿನಲ್ಲಿ ಬಂದ ಹಸೀನಾ ಬಾನು ಕುಟುಂಬಸ್ಥರು ಮೊದಲು ಮಹೇಶ್ ಮೇಲೆ ಹಲ್ಲೆ ಮಾಡಿ, ಮನೆಯೊಂದರಲ್ಲಿ ಇದ್ದ ಹಸೀನಾ ಬಾನುಳನ್ನು ಮೂವರು ಮಹಿಳೆಯರು ಹೊರಗೆ ಕರೆತಂದು ಗ್ರಾಮದಲ್ಲೇ ಹಲ್ಲೆ ಮಾಡಿದ್ದಾರೆ.
ಬಳಿಕ ತಾಮಸಂದ್ರ ಗ್ರಾಮದಿಂದ ಕನಕಪುರದ ಇಂದಿರಾನಗರಕ್ಕೆ ಕರೆದೊಯ್ದು,ಮಹೇಶ್ ಹಾಗೂ ಹಸೀನಾ ಬಾನುಗೆ ಅರ್ಧ ತಲೆ ಬೋಳಿಸಿದ್ದಾರೆ.
ಸೆ.20ರಂದು ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.