ಕರ್ನಾಟಕ, 17 ಮಾರ್ಚ್ 2025 – ಮೋಂಟ್ರಾ ಎಲೆಕ್ಟ್ರಿಕ್ ನ ಇ- ಎಸ್‌ಸಿವಿ ವಿಭಾಗವಾದ ಟಿವೊಲ್ಟ್ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಯಶವಂತಪುರದಲ್ಲಿ ತನ್ನ ಮೊದಲ ಇ-ಎಸ್‌ಸಿವಿ ಡೀಲರ್ ಶಿಪ್ ಅನ್ನು ಉದ್ಘಾಟಿಸಿದೆ. ಈ ಮೂಲಕ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಈ ಡೀಲರ್ ಶಿಪ್ ದಕ್ಷಿಣ ಭಾರತದಲ್ಲಿನ ಕರ್ನಾಟಕದ ಮೊದಲ ಇ-ಎಸ್‌ಸಿವಿ ಡೀಲರ್ ಶಿಪ್ ಆಗಿದ್ದು, ರಾಜ್ಯದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸುವ ಬ್ರ್ಯಾಂಡ್‌ನ ಬದ್ಧತೆಯನ್ನು ಇದು ಸೂಚಿಸುತ್ತದೆ. ಹೊಸ ಚಾನಲ್ ಪಾಲುದಾರ ಸಂಸ್ಥೆಯಾದ ಟಿವಿಎಸ್ ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅತ್ಯಾಧುನಿಕ 3ಎಸ್ (ಮಾರಾಟ, ಸೇವೆ, ಬಿಡಿಭಾಗಗಳು ಮತ್ತು ಚಾರ್ಜಿಂಗ್) ಸೌಲಭ್ಯವನ್ನು ಹೊಂದಿದ್ದು, ಇದು ಯಶವಂತಪುರದ ತುಮಕೂರು ರಸ್ತೆಯ 45/4, ಇಂಡಸ್ಟ್ರಿಯಲ್ ಸಬರ್ಬ್ ನಲ್ಲಿ ಸ್ಥಾಪಿತಗೊಂಡಿದೆ. ಉತ್ತಮ ಸ್ಥಳದಲ್ಲಿರುವ ಈ ಘಟಕವು ಗ್ರಾಹಕರಿಗೆ ಸುಲಭ ಸೇವೆ ಒದಗಿಸಲಿದೆ ಮತ್ತು ಅತ್ಯುತ್ತಮ ಅನುಭವ ಒದಗಿಸುವ ಉದ್ದೇಶವನ್ನು ಹೊಂದಿದೆ. ಅತ್ಯಾಧುನಿಕ ಉಪಕರಣಗಳು ಮತ್ತು ಉನ್ನತ ಮೂಲಸೌಕರ್ಯದಿಂದ ಸುಸಜ್ಜಿತಗೊಂಡಿರುವ ಈ ಡೀಲರ್ ಶಿಪ್, ಗ್ರಾಹಕರಿಗೆ ಉತ್ತಮ ಸೇವೆ ಮತ್ತು ಸುಗಮ ಮಾಲೀಕತ್ವದ ಅನುಭವವನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ.
ಈ ಹೊಸ ಡೀಲರ್ ಶಿಪ್ ಅನ್ನು ಟಿವೊಲ್ಟ್ ಎಲೆಕ್ಟ್ರಿಕ್ ವೆಹಿಕಲ್ಸ್ ನ (ಮೋಂಟ್ರಾ ಎಲೆಕ್ಟ್ರಿಕ್ ನ ಎಸ್‌ಸಿವಿ ವಿಭಾಗ) ಸಿಇಓ ಶ್ರೀ ಸಾಜು ನಾಯರ್ ಮತ್ತು ಟಿವಿಎಸ್ ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ನ ಸಿಇಓ ಶ್ರೀ ಮಧು ರಘುನಾಥ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡೀಲರ್ ಗಳು, ಗ್ರಾಹಕರು, ಪೂರೈಕೆದಾರರು ಮತ್ತು ಇತರ ಗಣ್ಯ ಅತಿಥಿಗಳು ಸೇರಿದಂತೆ ಪ್ರಮುಖ ಪಾಲುದಾರರು ಉಪಸ್ಥಿತರಿದ್ದರು.
ಮೋಂಟ್ರಾ ಎಲೆಕ್ಟ್ರಿಕ್ ನ ಇ- ಎಸ್‌ಸಿವಿ ವಿಭಾಗದ ಹೊಸ ಉತ್ಪನ್ನ ಆಗಿರುವ ಏವಿಯೇಟರ್ ಈಗ ಈ ಡೀಲರ್ ಶಿಪ್ ನಲ್ಲಿ ಲಭ್ಯವಿದೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆ ವಿಚಾರದಲ್ಲಿ ಹೊಸ ಮಾನದಂಡವನ್ನು ಹಾಕಿಕೊಟ್ಟಿರುವ ಏವಿಯೇಟರ್, ಉದ್ಯಮದಲ್ಲಿ ಅಗ್ರಗಣ್ಯವಾದ 245 ಕಿ.ಮೀ ಸರ್ಟಿಫೈಡ್ ರೇಂಜ್ ಮತ್ತು 170 ಕಿ.ಮೀ ಟ್ರೂ ರೇಂಜ್ ಅನ್ನು ಒದಗಿಸುತ್ತದೆ. 80 ಕೆಡಬ್ಲ್ಯೂ ಸಾಮರ್ಥ್ಯದ ಶಕ್ತಿಶಾಲಿ ಮೋಟಾರ್ ಮತ್ತು 300 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಉತ್ಪನ್ನವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತಿದ್ದು, ಇದು ಸಣ್ಣ ವಾಣಿಜ್ಯ ವಾಹನ ವಿಭಾಗದಲ್ಲಿ ಸಂಚಲನ ಸೃಷ್ಟಿಸಿದೆ. ಇದನ್ನು ದೀರ್ಘ ಬಾಳಿಕೆ ಮತ್ತು ವಿಶ್ವಾಸಾರ್ಹತೆಗಾಗಿ ನಿರ್ಮಿಸಲಾಗಿದ್ದು, ಇದು 7 ವರ್ಷಗಳವರೆಗೆ ಅಥವಾ 2.5 ಲಕ್ಷ ಕಿಲೋಮೀಟರ್ ಗಳ ವಿಸ್ತೃತ ವಾರಂಟಿಯೊಂದಿಗೆ ಬರುತ್ತದೆ. ಅತ್ಯಾಧುನಿಕ ಟೆಲಿಮ್ಯಾಟಿಕ್ಸ್ ನೊಂದಿಗೆ ಸುಸಜ್ಜಿತವಾಗಿದ್ದು, ಇದು ಶೇ.95ಕ್ಕಿಂತ ಹೆಚ್ಚು ಕಾರ್ಯ ನಿರ್ವಹಣಾ ಸಮಯವನ್ನು ಒದಗಿಸುತ್ತದೆ ಮತ್ತು ಆ ಮೂಲಕ ವಾಹನ ಮಾಲೀಕರಿಗೆ ಹೆಚ್ಚು ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಡುತ್ತದೆ ಮತ್ತು ಹೆಚ್ಚು ಲಾಭವನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಜು ನಾಯರ್ ಅವರು, “ಕರ್ನಾಟಕವು ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ಯಶವಂತಪುರದಲ್ಲಿ ನಮ್ಮ ಮೊದಲ ಡೀಲರ್ ಶಿಪ್ ಆರಂಭಗೊಂಡಿರುವುದು ಸಂತೋಷದ ಸಂಗತಿಯಾಗಿದೆ. ಮೋಂಟ್ರಾ ಎಲೆಕ್ಟ್ರಿಕ್ ನಲ್ಲಿ ನಾವು ಶುದ್ಧ ಸಾರಿಗೆ ಕ್ಷೇತ್ರಕ್ಕೆ ಬೇಕಾಗುವ ಹೊಸತನ ಮತ್ತು ಸುಸ್ಥಿರತೆ ಸಾಧಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿರಲು ಬದ್ಧರಾಗಿದ್ದೇವೆ. ಈ ಹೊಸ ಡೀಲರ್ ಶಿಪ್ ನಮ್ಮ ಪ್ರಯಾಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಗ್ರಾಹಕರಿಗೆ ಹತ್ತಿರವಾಗುವುದರ ಜೊತೆಗೆ ಉನ್ನತ ಕಾರ್ಯಕ್ಷಮತೆಯ ಇ-ಎಸ್‌ಸಿವಿಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ಟಿವಿಎಸ್ ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ಸ್ ಜೊತೆಗಿನ ನಮ್ಮ ಸಹಭಾಗಿತ್ವದ ಮೂಲಕ ನಾವು ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸುವ ಸೂಕ್ತ ಉತ್ಪನ್ನಗಳು ಮತ್ತು ಅತ್ಯುತ್ತಮ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದರು.
ಶ್ರೀ ಮಧು ರಘುನಾಥ್ ಮಾತನಾಡಿ, “ಮೋಂಟ್ರಾ ಎಲೆಕ್ಟ್ರಿಕ್ ಜೊತೆಗಿನ ಸಹಭಾಗಿತ್ವದಲ್ಲಿ ಈ ಹೊಸ ಡೀಲರ್ ಶಿಪ್ ಸ್ಥಾಪಿಸಿರುವುದು ನಮಗೆ ಸಂತೋಷ ತಂದಿದೆ. ಈ ಸಹಭಾಗಿತ್ವವು ಮೋಂಟ್ರಾ ಎಲೆಕ್ಟ್ರಿಕ್ ಅನ್ನು ಈ ಪ್ರದೇಶದಲ್ಲಿ ಪ್ರಮುಖ ಇವಿ ಕಂಪನಿಯಾಗಿ ಬೆಳೆಸುವುದರ ಜೊತೆಗೆ ಅದರ ಉಪಸ್ಥಿತಿಯನ್ನು ಹೆಚ್ಚಿಸಲಿದೆ. ಜೊತೆಗೆ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಉನ್ನತ ಕಾರ್ಯಕ್ಷಮತೆಯ ಇ-ಎಸ್‌ಸಿವಿಗಳ ಲಭ್ಯತೆಯನ್ನು ಕೂಡ ಹೆಚ್ಚಿಸುತ್ತದೆ. ಜೊತೆಯಾಗಿ ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಗ್ರಾಹಕರ ವಿವಿಧ ಸಾರಿಗೆ ಅಗತ್ಯಗಳನ್ನು ಪೂರೈಸುವ ಸೂಕ್ತ ಸಾರಿಗೆ ಉತ್ಪನ್ನಗಳನ್ನು ಒದಗಿಸುತ್ತೇವೆ” ಎಂದು ಹೇಳಿದರು.
ಮೋಂಟ್ರಾ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಕಂಪನಿಯು ಡೀಲರ್ ಶಿಪ್ ಗಳು ಮತ್ತು ಸೇವಾ ಕೇಂದ್ರಗಳ ಬಲವಾದ ಜಾಲದ ಮೂಲಕ ತನ್ನ ಉಪಸ್ಥಿತಿಯನ್ನು ತ್ವರಿತವಾಗಿ ವಿಸ್ತರಿಸುತ್ತಿದ್ದು, ಉತ್ತಮ ದರ್ಜೆಯ ಮಾರಾಟದ ನಂತರದ ಸೇವೆಯನ್ನು ಒದಗಿಸುತ್ತಿದೆ. ಈ ಡೀಲರ್ ಶಿಪ್ ನ ಆರಂಭವು ಭಾರತದಲ್ಲಿ ಸುಸ್ಥಿರ ಸರಕು ಸಾಗಣೆ ಮತ್ತು ಸಾರಿಗೆ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ಮೋಂಟ್ರಾ ಎಲೆಕ್ಟ್ರಿಕ್ ನ ಬದ್ಧತೆಯನ್ನು ಸಾರುತ್ತದೆ.