ತೆಲಂಗಾಣ : ರೈತರ ಪಾಲಿಗೆ ಮಂಗಗಳು ಪೊಮ ಶತ್ರುಗಳಾಗಿವೆ. ಮಂಗಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಮಂಗಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳಲು ಇಲ್ಲೊಬ್ಬ ವ್ಯಕ್ತಿ, ವಿಚಿತ್ರವಾದರೂ ಹೊಸ ರೂಪವನ್ನು ಕಂಡುಕೊಂಡಿದ್ದಾನೆ.
ಸುಗ್ಗಿಯ ಋತುವಿನಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳ ಮತ್ತು ಭತ್ತವನ್ನು ಮಂಗಗಳು ಹಾಳು ಮಾಡುತ್ತಿವೆ. ಹೀಗಾಗಿ ಖಮ್ಮಂ ಜಿಲ್ಲೆಯ ಮಂಚುಕೊಂಡ ಗ್ರಾಮದ ಯುವಕ ಚಿಂಪಾಂಜಿ ವೇಷ ಧರಿಸಿ ಕೋತಿಗಳನ್ನು ಓಡಿಸಲು ಮುಂದಾಗಿದ್ದಾನೆ.
ತಮ್ಮ ಊರಿನಲ್ಲಿ ಮಂಗಗಳಿಂದ ಹೇಗಾದರೂ ಬೆಳೆಗಳನ್ನು ಕಾಪಾಡಬೇಕು ಎಂದು ಕೊತಪಲ್ಲಿ ಜಾನಕಿರಾಮ್ ಹರಸಾಹಸ ಪಡುತ್ತಿದ್ದರು. ಇದಕ್ಕಾಗಿ ಯೂಟ್ಯೂಬ್ ಮೊರೆ ಹೋಗಿದ್ದ ಅವರು, ಅಲ್ಲಿ ಮಂಗಗಳು ಚಿಂಪಾಂಜಿ ಕಂಡರೆ ಭಯ ಪಡುತ್ತವೆ ಎಂಬುದನ್ನು ಕಂಡುಕೊಂಡಿದ್ದರು. ಇದು ತಿಳಿದ ತಕ್ಷಣವೇ ಚಿಂಪಾಜಿ ಅವತಾರ ತಾಳುವ ನಿರ್ಧಾರ ಮಾಡಿದ್ದರು. ಅಷ್ಟೇ ಅಲ್ಲ, ಚಿಂಪಾಜಿಗಳ ಚಲನವಲನಗಳ ಬಗ್ಗೆ ತಿಳಿದುಕೊಂಡಿದ್ದರು. ಅವು ಯಾವ ರೀತಿ ಶಬ್ದ ಮಾಡುತ್ತವೆ, ಅವುಗಳ ನಡುವಳಿಕೆ ಏನು ಎಂಬುದರ ಕುರಿತು ಸಂಪೂರ್ಣ ಅಧ್ಯಯನ ನಡೆಸಿದ್ದರು. ಇದಾದ ಬಳಿಕ ವಿಜಯವಾಡಕ್ಕೆ ತೆರಳಿ 1000 ಕೊಟ್ಟು ಚಿಂಪಾಜಿ ವೇಷವನ್ನು ಖರೀದಿಸಿ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದರು.
ಜಾನಕಿರಾಮ್ ಎಂಬುವವರು ಈ ವೇಷ ತೊಟ್ಟಿದ್ದರು. ಗ್ರಾಮದಲ್ಲಿ ಚಿಂಪಾಂಜಿ ವೇಷದಲ್ಲಿ ಓಡಾಡಿರುವುದರಿಂದ ಮಂಗ ಓಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಶ್ರೇಯಸ್ ಅಯ್ಯರ್ ಆರೋಗ್ಯದ ಬಗ್ಗೆ ಬಿಗ್ ಅಪ್‌ಡೇಟ್ | ಕ್ಯಾಪ್ಟನ್ ಸೂರ್ಯಕುಮಾರ್ ಹೇಳಿದ್ದೇನು?



















