ಬೆಂಗಳೂರು : ಕಾಂತಾರ:ಚಾಪ್ಟರ್ 1 ಸಿನಿಮಾದ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಖುದ್ದು ರುಕ್ಮಿಣಿಯವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಅವರು ಇಂದು ಮಧ್ಯಾಹ್ನ 3.41ಕ್ಕೆ ಮಾಡಿರುವ ಟ್ವೀಟ್‌ನಲ್ಲಿ, ಅನಾಮಿಕ ವ್ಯಕ್ತಿಯೊಬ್ಬ ನನ್ನ ಹೆಸರಿನಲ್ಲಿ ಪೋನ್ ಮಾಡಿ ಹಣ ಕೇಳುತ್ತಿದ್ದಾನೆ. ಯಾರೂ ಆತನನ್ನು ನಂಬಿ ಹಣ ಕಳಿಸಬಾರದು ಎಂದು ಮನವಿ ಮಾಡಿದ್ದಾರೆ.
ನಟಿಯ ಟ್ವೀಟ್‌ನಲ್ಲೇನಿದೆ?
ನಟಿ ರುಕ್ಮಿಣಿ ಅವರು ಮಾಡಿರುವ ಟ್ವೀಟ್‌ನಲ್ಲಿ, “9445893273 ಸಂಖ್ಯೆಯನ್ನು ಬಳಸುವ ವ್ಯಕ್ತಿಯೊಬ್ಬ ನನ್ನಂತೆ ನಟಿಸಿ ನಾನಾ ಜನರನ್ನು ಸಂಪರ್ಕಿಸಿ ಹಣ ಕೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಖ್ಯೆ ನನ್ನದಲ್ಲ ಮತ್ತು ಇದರಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣವಾಗಿ ನಕಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ಯಾವುದೇ ರೀತಿಯಲ್ಲೂ ತೊಡಗಿಸಿಕೊಳ್ಳಬೇಡಿ” ಎಂದು ನಟಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ‘ಮಾರ್ಕ್’ ಸಿನಿಮಾದ ಟೀಸರ್ ಔಟ್ | ಡೆಡ್ಲಿ ಅವತಾರದಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್


















