ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಖ್ಯಾತಿ ಪಡೆದ ಮೊನಾಲಿಸಾ, ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ವಿಚಾರ ಗೊತ್ತಿದೆ. ಸರೋಜ್ ಮಿಶ್ರಾ (Saroj Mishra) ಅವರ ನಿರ್ದೇಶನದಲ್ಲಿ ಮೊನಾಲಿಸಾ ಬೆಳ್ಳಿತೆರೆಯ ಮೇಲೆ ಮಿಂಚಲಿದ್ದು, ಆ ಸಿನಿಮಾ ಏಪ್ರಿಲ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದೆ.
ಇನ್ನು ಚಿತ್ರ ನಿರ್ಮಾಣಕ್ಕಾಗಿ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಳ್ಳುತ್ತಿದ್ದು, ಚಿತ್ರಕ್ಕೆ “ದಿ ಡೈರಿ ಆಫ್ ಮಣಿಪುರ್” (“The Diary of Manipur”.) ಎಂಬ ಹೆಸರನ್ನಿಡಲಾಗಿದೆ. ಇತ್ತ ತನ್ನ ಮೊದಲ ಚಿತ್ರಕ್ಕೆ ಮೊನಾಲಿಸಾ ಪಡೆದುಕೊಂಡಿರುವ ಸಂಭಾವನೆ ಕೂಡ ರಿವೀಲ್ ಆಗಿದ್ದು, ಬೆಳ್ಳಿತೆರೆಯ ಮೊದಲು ಮಿಂಚಲು ಆಕೆ 21 ಲಕ್ಷ ರೂಪಾಯಿಯನ್ನು ಪಡೆದಿದ್ದಾಳೆ ಎಂಬ ಮಾಹಿತಿ ಹೊರ ಬಿದ್ದಿದೆ.
ಚಿತ್ರದ ಬಜೆಟ್ 20 ಕೋಟಿ ರೂಪಾಯಿ ಎಂದು ಚಿತ್ರತಂಡ ತಿಳಿಸಿದ್ದು, ಅಕ್ಟೋಬರ್ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವನ್ನು ತಂಡ ಇಟ್ಟುಕೊಂಡಿದೆ ಎನ್ನಲಾಗಿದೆ.