ನವದೆಹಲಿ: ಮಹಾಕುಂಭ ಮೇಳದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಮೊನಾಲಿಸಾ (Maha Kumbh Viral Girl Monalisa) ಮೇಲೆ ನಿರ್ದೇಶಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದ್ದು, ಅರೆಸ್ಟ್ ಆಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸನೋಜ್ ಮಿಶ್ರಾ (Sanoj Mishra) ಅವರನ್ನು ಅತ್ಯಾಚಾರ (Rape) ಆರೋಪದಡಿ ಬಂಧಿಸಲಾಗಿದೆ. ಚಿತ್ರನಟಿ (Actress) ಮಾಡುವುದಾಗಿ ಹೇಳಿ ಸನೋಜ್ ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ದೂರು ನೀಡಿದ ಆರೋಪದ ಅಡಿ ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
2020 ರಲ್ಲಿ ಝಾನ್ಸಿಯಲ್ಲಿ ವಾಸಿಸುತ್ತಿದ್ದಾಗ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದೆ. ನನ್ನ ವಿಡಿಯೋ ನೋಡಿ ಸನೋಜ್ ಮಿಶ್ರ ನನ್ನನ್ನು ಸಂಪರ್ಕಿಸಿದ್ದರು. ಆನಂತರ ನಿರಂತರ ಸಂಪರ್ಕದಲ್ಲಿದ್ದೇವು. ಜೂನ್ 2021 ರಲ್ಲಿ ನಾನು ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇದ್ದೇನೆ. ಭೇಟಿಯಾಗಲು ಬಾ ಎಂದು ಕರೆದರು. ನಾನು ಬರಲು ನಿರಾಕರಿಸಿದಾಗ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. ಆಗ ಹೆದರಿ, ಮರುದಿನ ನಾನು ಅವರನ್ನು ಭೇಟಿಯಾಗಲು ಒಪ್ಪಿಕೊಂಡೆ. ಮಿಶ್ರಾ ಅವರು ರೆಸಾರ್ಟ್‌ಗೆ ಕರೆದೊಯ್ದು ಮಾದಕ ದ್ರವ್ಯ ನೀಡಿ ಹಲ್ಲೆ ನಡೆಸಿದರು. ಅಷ್ಟೇ ಅಲ್ಲದೇ ನನ್ನ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದರು. ಕರೆದಾಗ ಬರದೇ ಇದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದು ಎಂದು ಆರೋಪಿಸಿದ್ದಾರೆ. ಮೊನಾಲಿಸಾ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೆಲವು ದಿನಗಳ ನಂತರ ಸನೋಜ್ ಮಿಶ್ರಾ ʼದಿ ಡೈರಿ ಆಫ್ ಮಣಿಪುರʼ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಈಗ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.