ನವದೆಹಲಿ: 76ನೇ ಗಣರಾಜ್ಯೋತ್ಸವ (Republic Day 2025) ಸಂಭ್ರಮದಲ್ಲಿ ಇಡೀ ದೇಶ ಮಿಂದೇಳುತ್ತಿದ್ದೆ. ರಾಷ್ಟ್ರೀಯ ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಸಂಭ್ರಮದಿಂದ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವುದೇ ರಾಜ್ಯಕ್ಕೆ, ಯಾವುದೇ ಕಾರ್ಯಕ್ರಮಕ್ಕೆ ಹೋದರು ಅವರು ತೊಟ್ಟ ಉಡುಗೆ ಭಾರೀ ವಿಶೇಷತೆಯಿಂದಲೇ ಕೂಡಿರುತ್ತವೆ. ಈ ಬಾರಿಯೂ ಪ್ರಧಾನಿ ಮೋದಿ ಬಟ್ಟೆಯಿಂದಲೇ ವಿಶೇಷ ಗಮನ ಸೆಳೆದಿದ್ದಾರೆ.
ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಪೇಟ ಇಡೀ ದೇಶದ ಜನರ ಗಮನ ಸೆಳೆದಿದೆ. ಪ್ರಧಾನಿ ಮೋದಿ (PM Modi) ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ಉಡುಗೆ- ತೊಡುಗೆ ಧರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಅಲ್ಲದೇ, ಆಯಾ ಭಾಗದ ಸಂಸ್ಕೃತಿಗೆ ತಕ್ಕಂತೆ ಪ್ರಧಾನಿ ಬಟ್ಟ ಧರಿಸುವ ಮೂಲಕ ಗೌರವ ನೀಡುತ್ತಿರುತ್ತಾರೆ.
ಭಾರತದ ವೈವಿಧ್ಯತೆಯನ್ನು ಸಂಕೇತಿಸುವ ಹಳದಿ ಮತ್ತು ಕೆಂಪು ಬಣ್ಣದ ರಾಜಸ್ಥಾನಿ ಬಂಧನಿ ಪೇಟವನ್ನು ಈ ಬಾರಿ ಧರಿಸಿದ್ದರು. ಜೊತೆಗೆ ಕಪ್ಪು ಕಂದು ಬಣ್ಣದ ಜಾಕೆಟ್, ಬಂದಗಾಲ ಪೈಜಾಮಾ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದರು.
ಗಣರಾಜ್ಯೋತ್ಸವ ಪರೇಡ್‌ಗೂ ಮುನ್ನ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸುತ್ತಿದ್ದಂತೆಯೇ ಅವರು ಧರಿಸಿರುವ ಉಡುಪಿನ ಫಸ್ಟ್ ಲುಕ್ ಬಹಿರಂಗವಾಯಿತು.