ಕೊಪ್ಪಳ : ದೇಶದಲ್ಲಿ ಎಲ್‌ಪಿಜಿ ಅಭಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವಿನ ಗೆಳೆತನವೇ ಕಾರಣ. ಅವರ ದೋಸ್ತಿಯಿಂದಲೇ ನಮಗೆ ಈ ಸ್ಥಿತಿ ಬಂದಿರೋದು ಎಂದು ಸಚಿವ ಎನ್.ಎಸ್.ಬೋಸರಾಜು ಕಿಡಿಕಾರಿದ್ದಾರೆ.
ದೇಶದಲ್ಲಿ ಎಲ್ ಪಿ ಜಿ ಅಭಾವದ ವಿಚಾರವಾಗಿ ಕೊಪ್ಪಳದ ಮುನಿರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೋಸರಾಜು, ರಾಜ್ಯದಲ್ಲಿ, ರಾಷ್ಟ್ರದಲ್ಲಿ ಎಲ್ಲ ಕಡೆ ಸಿಲಿಂಡರ್ ಅಭಾವ ಆಗಿದೆ. ಈಗಾಗಲೆ ನಮ್ಮ ಸಿಎಂ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ನಾವು ಎನಾದ್ರು ಮಾತಾಡಿದ್ರೆ ಮೋದಿ ವಿರುದ್ದ ಮಾತಾಡ್ತಾರೆ ಅಂತಾರೆ. ಆದರೆ ಮೋದಿಯವರು ಟ್ರಂಪ್ ಜೊತೆ ಸ್ನೇಹಿತರಾಗಿದ್ದಾರೆ ಅದಕ್ಕೆ ನಮಗೆ ಈ ಪರಿಸ್ಥಿತಿ ಬಂದಿರೋದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿಯವರು ಟ್ರಂಪ್‌ನನ್ನು ವಿರೋಧ ಮಾಡಿದ್ರೆ ಬೇರೆ ದೇಶದವರು ನಮಗೆ ಸಪೋರ್ಟ್ ಮಾಡ್ತಾಯಿದ್ರು. ಆದರೆ ಇವರು ಟ್ರಂಪ್ ನ ಅಪ್ಕೊಳೋದು ಮಾಡ್ತಾಯಿದ್ದಾರೆ, ಅದಕ್ಕೆ ಟ್ರಂಪ್ ನಮ್ಮನ್ನ ಬ್ಲಾಕ್ ಮೇಲ್ ಮಾಡ್ತಿರೋದು ಎಂದು ಹೇಳಿದ್ದಾರೆ.
ಇವಾಗ ಮೇಜರ್ ಇರೋದು ಅಮೇರಿಕಾ, ರಷ್ಯಾ -ಚೈನಾ ಬೇರೆ ಬೇರೆ ಇವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಚೀನಾ, ಪಾಕಿಸ್ತಾನ ಬಿಟ್ಟರೆ ಬೇರೆಲ್ಲ ದೇಶಗಳ ಜೊತೆ ಚನ್ನಾಗಿದ್ವಿ. ಮೋದಿಯವರು ಟ್ರಂಪ್ ಜೊತೆ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದಾರೆ, ಅವರ ಎಲೆಕ್ಷನ್ ಸಮಯದಲ್ಲಿ ಹೋಗಿ ಭಾರತಿಯರ ಮತ ಹಾಕಿಸಿ ಬಂದಿದ್ದಾರೆ. ಮೊದಲಿನಂತೆ ವಿದೇಶ ನೀತಿ ಪಾಲಿಸಿದ್ದರೆ ನಮಗೆ ಈ ಪರಿಸ್ಥಿತಿ ಬರ್ತಾಯಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ : ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ವಿರುದ್ಧ ಅಹಮದ್ ಶೆಹಜಾದ್ ತೀವ್ರ ಆಕ್ರೋಶ!



















