2025ನೇ ವರ್ಷ ಭಾರತದ ಪಾಲಿಗೆ ಹೆಮ್ಮೆಯ ವರ್ಷದಾಗಿದೆ. ಭದ್ರತೆ, ಕ್ರೀಡೆ, ವಿಜ್ಞಾನ, ಸಂಸ್ಕೃತಿ ಎಲ್ಲ ಕ್ಷೇತ್ರಗಳಲ್ಲೂ ಭಾರತ ತನ್ನ ಛಾಪು ಮೂಡಿಸಿದೆ. ಇದೇ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ. ಆಪರೇಷನ್ ಸಿಂಧೂರ್‌ನಿಂದ ಹಿಡಿದು ಕ್ರೀಡಾ ಸಾಧನೆಗಳವರೆಗೆ, ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಕ್ಷಣಗಳನ್ನೆಲ್ಲಾ ಪ್ರಧಾನಿ ಸ್ಮರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದ 129 ನೇ ಸಂಚಿಕೆ ಇಂದು ಪ್ರಸಾರವಾಯಿತು. ಇದು 2025 ರ ಕೊನೆಯ ಸಂಚಿಕೆಯಾಗಿತ್ತು. ಆದ್ದರಿಂದ, ಅವರು 2026 ರ ಸವಾಲುಗಳು, ಸಾಧ್ಯತೆಗಳು ಮತ್ತು ಬೆಳವಣಿಗೆಗಳ ಜೊತೆಗೆ 2025 ರ ಸಾಧನೆಗಳ ಬಗ್ಗೆ ಚರ್ಚಿಸಿದರು. 2025 ಭಾರತಕ್ಕೆ ಹೆಮ್ಮೆಯ ಮೈಲಿಗಲ್ಲುಗಳ ವರ್ಷವಾಗಿದೆ ಎಂದು ಅವರು ಶ್ಲಾಘಿದರು..
ಇನ್ನೂ 2025 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಹಲವು ಕ್ಷಣಗಳನ್ನ ನೀಡಿದೆ.. ರಾಷ್ಟ್ರೀಯ ಭದ್ರತೆಯಿಂದ ಕ್ರೀಡಾ ಕ್ಷೇತ್ರದವರೆಗೆ, ವಿಜ್ಞಾನ ಪ್ರಯೋಗಾಲಯಗಳಿಂದ ವಿಶ್ವದ ಅತಿದೊಡ್ಡ ವೇದಿಕೆಗಳವರೆಗೆ, ಭಾರತ ಎಲ್ಲೆಡೆ ಬಲವಾದ ಛಾಪನ್ನು ಹಂಚಿದೆ. ಇನ್ನೇನು 2026ನೇ ವರ್ಷವು ಹತ್ತಿರದಲ್ಲಿದೆ… ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ, 1 ವರ್ಷದ ನೆನಪುಗಳು ನನ್ನ ಮನಸ್ಸಿನಲ್ಲಿ ತುಂಬಿ ತುಳಿಕುತ್ತಿವೆ.. ಅನೇಕ ಚರ್ಚೆ, ಸಾಧನೆ ಅಲ್ಲದೇ ಈ ವರ್ಷ ಆಪರೇಷನ್ ಸಿಂಧೂರ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತ ಎಂದು ಮೋದಿ ಹೆಮ್ಮೆಯಿಂದ ಹೇಳಿದರು..
ಕ್ರೀಡಾ ಜಗತ್ತಿನಲ್ಲೂ ಭಾರತ 2025ರಲ್ಲಿ ಹೊಸ ಇತಿಹಾಸ ಬರೆದಿದೆ.. ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತೀಯ ಕ್ರೀಡಾಪಟುಗಳು ದೇಶದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ್ದಾರೆ… ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ… ಈ ಸಾಧನೆಗಳ ಹಿಂದೆ ಯುವಕರ ಪರಿಶ್ರಮ, ಶಿಸ್ತು ಮತ್ತು ದೇಶಭಕ್ತಿ, ಆತ್ಮವಿಶ್ವಾಸವು ಭಾರತದ ಭವಿಷ್ಯದ ಬಲ.. ಯುವ ಭಾರತವೇ ಹೊಸ ಭಾರತದ ಶಕ್ತಿ ಎಂಬ ಸಂದೇಶವನ್ನ ನೀಡಿದರು.
ದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ವಾಸವಿದ್ದಾರೆ. ದುಬೈ ಕನ್ನಡಿಗರು ತಮ್ಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡ್ರು. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ, ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆಯೇ ಅನ್ನೋ ಆತಂಕ ದುಬೈ ಕನ್ನಡಿಗರಿಗೆ ಬಂತು. ಆಗಿನಿಂದಲೇ ಅವರು ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ ಮಾಡಿದರು ಎಂದು ತಿಳಿಸಿದ್ದಾರೆ.
ಕನ್ನಡ ಪಾಠಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸುತ್ತಿದ್ದಾರೆ. ಕನ್ನಡ ಓದು, ಬರಹ, ಮಾತಾಡೋದು ಕಲಿಸ್ತಿದ್ದಾರೆ. ಈಗ ಆ ಪಾಠಶಾಲೆಯಲ್ಲಿ ಒಂದು ಸಾವಿರ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಕೆಲಸ ಆಗ್ತಿದೆ. ಈ ಮೂಲಕ ದುಬೈನಲ್ಲಿ ಇರುವ ಕನ್ನಡಿಗರು ಭಾಷಾಭಿಮಾನ ಮೆರೆಯುತ್ತಿದ್ದಾರೆ. ಕನ್ಮಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ, ಭಾಷೆ ನಮ್ಮ ಹೆಮ್ಮೆಯಾಗಿದೆ ಎಂದು ಹಾಡಿಹೊಗಳಿದ್ದಾರೆ.
ಪ್ರಯಾಗರಾಜ್ ಮಹಾಕುಂಭವು ಇಡೀ ಜಗತ್ತನ್ನು ಬೆರಗುಗೊಳಿಸಿತು. ವರ್ಷದ ಕೊನೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭವು ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯನ್ನು ತುಂಬಿತು. ಭಾರತದ ಯುವಕರು ಯಾವಾಗಲೂ ನಾವೀನ್ಯತೆಯ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಅಷ್ಟೇ ಜಾಗೃತರಾಗಿದ್ದಾರೆ..
ಇನ್ನೂ ಗೀತಾಂಜಲಿ ಐಐಎಸ್ ಸಿ ಇನ್ಮುಂದೆ ಕೇವಲ ತರಗತಿ ಕೊಠಡಿಯಲ್ಲ, ಕ್ಯಾಂಪಸ್‌ನ ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಸಂಪ್ರದಾಯಗಳು ಮತ್ತು ಶಾಸ್ತ್ರೀಯ ಪ್ರಕಾರಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು ಇಲ್ಲಿ ಒಟ್ಟಿಗೆ ಅಭ್ಯಾಸ ಮಾಡುತ್ತಾರೆ. ಪ್ರಾಧ್ಯಾಪಕರು ಒಟ್ಟಿಗೆ ಕುಳಿತುಕೊಳ್ಳುತ್ತಾರೆ ಮತ್ತು ಅವರ ಕುಟುಂಬಗಳು ಸಹ ಇದರಲ್ಲಿ ಸೇರುತ್ತಾರೆ ಎಂದಿದ್ದಾರೆ..
ದೇಶದ ಭದ್ರತೆಗೆ ಭಾರತೀಯ ಭದ್ರತಾ ಪಡೆಗಳು ತೋರಿದ ಅಪಾರ ಧೈರ್ಯ ಮತ್ತು ತ್ಯಾಗ ಮೆಚ್ಚುಮತಹದ್ದು, ಇದು ಭಾರತದ ತಂತ್ರಜ್ಞಾನ, ಗುಪ್ತಚರ ವ್ಯವಸ್ಥೆ ಹಾಗೂ ಸಂಯುಕ್ತ ಸೈನಿಕ ಕಾರ್ಯಾಚರಣೆಯ ಶಕ್ತಿಯ ಪ್ರತೀಕವಾಗಿದೆ.. ದೇಶದ ರಕ್ಷಣೆ ವಿಷಯ ಅಂತ ಬಂದಾಗ ಭಾರತದ ಸೇನಾ ಪಡೆಯು ತಮ್ಮ ಜೀವವನ್ನೂ ಲೆಕ್ಕಿಸದೇ ಹೋರಾಡುತ್ತಾರೆ. ಇದಕ್ಕೆ ಉದಾಹರಣೆಯೇ ಆಪರೇಷನ್ ಸಿಂಧೂರ್ ಎಂದು ಜಗತ್ತಿಗೆ ಸ್ಪಷ್ಟ ಸಂದೇಶ ನೀಡಿದರು…
ಒಟ್ಟಾರೆ, ಆಪರೇಷನ್ ಸಿಂಧೂರ್ ನಂತಹ ಭದ್ರತಾ ಯಶಸ್ಸಿನಿಂದ ಹಿಡಿದು, ಕ್ರೀಡಾ ಸಾಧನೆಗಳು ಮತ್ತು ಯುವಶಕ್ತಿಯವರೆಗೆ 2025ರಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿದೆ. ಮನ್ ಕಿ ಬಾತ್ ಮೂಲಕ ಪ್ರಧಾನಿ ಮೋದಿ ನೀಡಿದ ಈ ಸಂದೇಶ, ದೇಶದ ಆತ್ಮವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಇದನ್ನೂ ಓದಿ : ಬೆಂಗಳೂರು ಟು ಕನ್ಯಾಕುಮಾರಿ.. 702 ಕಿ.ಮೀ ಯಶಸ್ವಿ ‘ಸೈಕಲ್ ಯಾತ್ರೆ’ ಮಾಡಿದ ಶಾಸಕ ಸುರೇಶ್ ಕುಮಾರ್!



















