ಪ್ರಧಾನಿ ನರೇಂದ್ರ ಮೋದಿ ಸಾಬಾರಮತಿ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ಚಿತ್ರಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಲು ಮುಂದಾಗಿದೆ.
ವಿಕ್ರಾಂತ್ ಮಾಸ್ಸಿ ನಟನೆಯ ‘ದಿ ಸಾಬರಮತಿ ರಿಪೋರ್ಟ್’ ಸದ್ದು ಮಾಡುತ್ತಿದೆ. ಈ ಚಿತ್ರ ನ. 15ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಾಶಿ ಖನ್ನಾ, ರಿದ್ಧಿ ಡೋಗ್ರಾ ನಟಿಸಿದ್ದಾರೆ. ಧೀರಜ್ ಶರ್ಮಾ ನಿರ್ದೇಶನ ಮಾಡಿದ್ದರೆ, ಏಕ್ತಾ ಕಪೂರ್ ಬಂಡವಾಳ ಹೂಡಿದ್ದಾರೆ.
ಬಿಡುಗಡೆಯಾಗುತ್ತಿದ್ದಂತೆ ಪ್ರಧಾನಿ ಮೋದಿ ಚಿತ್ರವನ್ನು ಹೊಗಳಿದ್ದರು. ಹೀಗಾಗಿ ಜನರು ಚಿತ್ರ ನೋಡಲು ಮುಗಿ ಬೀಳುತ್ತಿದ್ದಾರೆ.
ಈ ಸಿನಿಮಾದ ಒಟ್ಟಾರೆ ಗಳಿಕೆ 7.45 ಕೋಟಿ ರೂಪಾಯಿ ಆಗಿದೆ. ನ. 15ರಂದು 1.25 ಕೋಟಿ ರೂ, ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ 2.1 ಕೋಟಿ ರೂ. 3 ಕೋಟಿ ರೂ. ಗಳಿಸಿದೆ. ವಾರದ ದಿನವಾದ ಸೋಮವಾರ ಈ ಚಿತ್ರ 1.15 ಕೋಟಿ ರೂ. ಗಳಿಸಿದೆ. ಅಲ್ಲದೇ, ಬುಕ್ ಮೈ ಶೋನಲ್ಲಿ ‘ದಿ ಸಾಬರ್ಮತಿ ರಿಪೋರ್ಟ್’ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. 12 ಸಾವಿರಕ್ಕೂ ಅಧಿಕ ಜನ ವೋಟ್ ಮಾಡಿದ್ದಾರೆ. ಈ ಚಿತ್ರಕ್ಕೆ 8.3 ರೇಟಿಂಗ್ ಸಿಕ್ಕಿದೆ.