ನವದೆಹಲಿ: ಇಸ್ರೇಲ್ ನಲ್ಲಿ ಭಾರತೀಯ ಕಾರ್ಮಿಕರ ನೇಮಕಾತಿಗೆ ಮೋದಿ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದ್ದಾರೆ.
ಈ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC)ದ ಮೂಲಕ ಸುಮಾರು 15 ಸಾವಿರ ಭಾರತೀಯ ಉದ್ಯೋಗಿಗಳನ್ನು ಇಸ್ರೇಲ್ ಗೆ ಕಳುಹಿಸಲಾಗುತ್ತಿದೆ. ಮೋದಿ ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಇಸ್ರೇಲ್ ನಲ್ಲಿ ಸುಮಾರು 15 ಸಾವಿರ ಭಾರತೀಯ ಉದ್ಯೋಗಿಗಳ ನೇಮಕಾತಿಯನ್ನು ಸುಗಮಗೊಳಿಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಹಿಂದೆ ಅನೇಕ ಭಾರತೀಯ ಯುವಕರು ರಷ್ಯಾ-ಉಕ್ರೇನ್ ಯುದ್ಧಕ್ಕೆ ಹೋಗಲು ಸಂಶಯಾಸ್ಪದ ಏಜೆಂಟ್ ಗಳಿಂದ ವಂಚಿತರಾಗಿದ್ದರು. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಮೋದಿ ಸರ್ಕಾರದ ಯುವ ವಿರೋಧಿ ನೀತಿಗಳಿಂದ ಪ್ರೇರಿತವಾದ ನಿರುದ್ಯೋಗದ ಬಗ್ಗೆ ಹೇಳುತ್ತದೆ ಎಂದು ಆರೋಪಿಸಿದ್ದಾರೆ.
ಘರ್ಷಣೆಯ ವಲಯಗಳಲ್ಲಿ ಕೆಲಸ ಹುಡುಕುವಂತೆ ಒತ್ತಾಯಿಸುತ್ತಿರುವ ಹರಿಯಾಣದ ಯುವಕರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ “ತಕ್ಕ ಪಾಠ” ನೀಡಲಿದ್ದಾರೆ ಎಂದು ಗುಡುಗಿದ್ದಾರೆ.