ಬೆಂಗಳೂರು: ರಾಜ್ಯ ರೈಲ್ವೆ ಇಲಾಖೆಗೆ ಮತ್ತೊಂದು ವಂದೇ ಭಾರತ್ ರೈಲು ಸೇರ್ಪಡೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲಿಗೆ ಇಂದು ಹಸಿರು ನಿಶಾನೆ ನೀಡಲಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಕನಸು ನನಸಾಗಲಿದೆ.
ರಾಜ್ಯ ರೈಲ್ವೆಗೆ 11ನೇ ವಂದೇ ಭಾರತ್ ರೈಲು ಇದಾಗಲಿದೆ. ಇಂದು ಬೆಳಗ್ಗೆ 11:15ಕ್ಕೆ ನಗರದ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಟು ಬೆಳಗಾವಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಬುಧವಾರ ಹೊರತುಪಡಿಸಿ ವಾರದ 6 ದಿನಗಳು ಈ ರೈಲು ಸಂಚರಿಸಲಿದೆ. ಕಿತ್ತೂರು ಕರ್ನಾಟಕ, ದಕ್ಷಿಣ ಕರ್ನಾಟಕ ಮೂಲಕ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸಲಿದೆ. ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ತಲುಪುವ ರೈಲು, ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ನಡುವೆ ಸಂಪರ್ಕಿಸಲಿದೆ. ಪ್ರಯಾಣದ ಅವಧಿ 8:50 ಗಂಟೆ ಇರಲಿದೆ.
“ಟಿಕೇಟ್ ದರ ಹೇಗಿರಲಿದೆ ?”
ಎಲ್ಲಿಂದ ಎಲ್ಲಿಗೆ ?
ಬೆಂಗಳೂರು – ಬೆಳಗಾವಿ : 1,575ರೂ.(ಚೇರ್ ಕಾರ್) & 2,905 ರೂ (ಎಕ್ಸಿಕ್ಯೂಟಿವ್ ಚೇರ್ ಕಾರ್)
ಬೆಂಗಳೂರು – ಧಾರವಾಡ : 1,360 ರೂ. (ಚೇರ್ ಕಾರ್) & 2,470 ರೂ.(ಎಕ್ಸಿಕ್ಯೂಟಿವ್ ಚೇರ್ ಕಾರ್)
ಬೆಂಗಳೂರು -ಹಾವೇರಿ : 995 ರೂ. (ಚೇರ್ ಕಾರ್) & 1,935 ರೂ.( ಎಕ್ಸಿಕ್ಯೂಟಿವ್ ಚೇರ್ ಕಾರ್)
ಬೆಂಗಳೂರು – ದಾವಣಗೆರೆ : 890 ರೂ. (ಚೇರ್ ಕಾರ್) & 1,715 ರೂ. (ಎಕ್ಸಿಕ್ಯೂಟಿವ್ ಚೇರ್ ಕಾರ್)
ಬೆಂಗಳೂರು – ತುಮಕೂರು : 425 ರೂ.(ಚೇರ್ ಕಾರ್) & 810 ರೂ. (ಎಕ್ಸಿಕ್ಯೂಟಿವ್ ಚೇರ್ ಕಾರ್)
ಬೆಂಗಳೂರು ಕೆ.ಎಸ್.ಆರ್ – ಯಶವಂತಪುರ : 365 ರೂ. & 2955 ರೂ. (ಎಕ್ಸಿಕ್ಯೂಟಿವ್ ಚೇರ್ ಕಾರ್)
ಬೆಳಗಾವಿ -ಬೆಂಗಳೂರು : 1,630 ರೂ.(ಚೇರ್ ಕಾರ್) & 2,955 ರೂ.(ಎಕ್ಸಿಕ್ಯೂಟಿವ್ ಚೇರ್ ಕಾರ್)