ಬ್ರೆಜಿಲ್ : 17ನೇ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಬ್ರೆಜಿಲ್ ನ ರಿಯೋ ಡಿ ಜನೈರೋಗೆ ಆಗಮಿಸಿದ್ದಾರೆ.
‘ಆಪರೇಷನ್ ಸಿಂಧೂರ್’ ಎಂಬ ಥೀಂ ನಲ್ಲಿ ನಿರ್ಮಾಣ ಮಾಡಲಾದ ನೃತ್ಯ ಸಂಯೋಜನೆಯ ಮೂಲಕ ನರೇಂದ್ರ ಮೋದಿಯ ಅವರನ್ನು ಅನಿವಾಸಿ ಭಾರತೀಯರು ಬರ ಮಾಡಿಕೊಂಡರು. ಭಾರತೀಯ ಸಶಸ್ತ್ರ ಪಡೆಗಳ ಶೌರ್ಯಕ್ಕೆ ನೃತ್ಯದ ಮೂಲಕ ಗೌರವಿಸಿದರು.
‘ಸೌಗಂಧ್ ಮುಜೆ ಇಸ್ ಮಿಟ್ಟಿ ಕಿ’ ಎಂಬ ದೇಶ ಭಕ್ತಿ ಗೀತೆಗೆ ಈ ನೃತ್ಯವನ್ನು ಸಂಯೋಜನೆ ಮಾಡಿದರು. ನೃತ್ಯ ಪ್ರದರ್ಶನ ಮಾಡುವಾಗ ಮೋದಿ ಅವರು ಕೆಲ ಕ್ಷಣ ಭಾವುಕರಾದರು.
ಬಳಿಕ ಬ್ರೆಜಿಲ್ ನ ಸಂಗೀತ ತಂಡವೊಂದು ಭಕ್ತಿ ಸಂಗೀತವನ್ನು ಪ್ರದರ್ಶನ ಮಾಡಿತ್ತು. ಅದು ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ ಪಡೆದ ನರೇಂದ್ರ ಮೋದಿ ಅವರು, ಕೆಲಹೊತ್ತು ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು.