ನವದೆಹಲಿ: ಲೋಕಸಭೆಯಲ್ಲಿ (Lok Sabha) ತಮ್ಮ ಭಾಷಣಕ್ಕೆ ಅಡ್ಡಿ ಮಾಡುತ್ತಿದ್ದ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುಡಿಯಲು ನೀರು ಕೊಟ್ಟು ಉಪಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media)ಭಾರೀ ವೈರಲ್ ಆಗುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು.
ಮಣಿಪುರ್ ಗೋʼ, ʼಮಣಿಪುರ್ ವಾಂಟ್ ಜಸ್ಟಿಸ್ʼ, ʼಅಗ್ನಿವೀರ್ʼ ಇತ್ಯಾದಿ ಘೋಷಣೆ ಕೂಗಿ ಅಡ್ಡಿ ಪಡಿಸಲು ಮುಂದಾಗಿದ್ದರು. ಸಂದರ್ಭದಲ್ಲಿ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರಿಗೆ ಅಲ್ಲಿಂದ ತೆರಳುವಂತೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದರು. ಆದರೂ ಸದಸ್ಯರು ಅಲ್ಲಿಂದ ಕದಲದೆ ಪ್ರತಿಭಟನೆ ನಡೆಸುತ್ತಲೇ ಇದ್ದರು.
ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಿಲ್ಲಿಸುವುದಿಲ್ಲ ಎನ್ನುವುದು ಮೋದಿಗೆ ತಿಳಿಯುತ್ತಿದ್ದಂತೆ ಪ್ರಧಾನಿಯವರು ತಮ್ಮ ಮಾತಿನ ವರಸೆ ಮುಂದುವರೆಸಿದರು. ಆಗ ಕೆಲವು ಸದಸ್ಯರು ಕಿರುಚಿ ಕಿರುಚಿ ಸುಸ್ತಾದರು. ಇದನ್ನು ಗಮನಿಸಿದ ಪ್ರಧಾನಿ ಮೋದಿ ಅವರು ಕುಡಿಯಲು ಸದಸ್ಯರಿಗೆ ನೀರು ನೀಡಿದರು. ಆದರೆ, ಓರ್ವ ಸದಸ್ಯರು ಈ ನೀರನ್ನೂ ಪಡೆದಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ಮೋದಿ ಮಂಗಳವಾರ 2 ಗಂಟೆ 15 ನಿಮಿಷ ಮಾತನಾಡಿದರು. ಆರಂಭದಿಂದ ಕೊನೆಯವರೆಗೂ ಪ್ರತಿ ಪಕ್ಷದ ಸದಸ್ಯರು ಘೋಷಣೆ ಕೂಗಿ ಅಡ್ಡಿಪಡಿಸಿದರು.