ಉಡುಪಿ : ಉಡುಪಿ ಕಾರ್ಯಕ್ರಮ ಮುಗಿಸಿ ಮೋದಿ ಅವರು ಮಂಗಳೂರು ಏರ್‌ಪೋರ್ಟ್‌ಗೆ ತೆರಳಿದರು. ಅಲ್ಲಿಂದ ಗೋವಾ ಹಾರಿದ್ದಾರೆ. ಗೋವಾ ಪರ್ತಗಾಳಿ ಮಠದ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಗೋವಾದ ಪರ್ತಗಾಳಿ ಮಠದಲ್ಲಿ 77 ಅಡಿ ಉದ್ದದ ಕಂಚಿನ ಶ್ರೀರಾಮ ಮೂರ್ತಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ವರ್ಣ ರಂಜಿತ ಚಿತ್ತಾರದಲ್ಲಿ ಸಿದ್ದವಾಗುತ್ತಿರುವ ವೇದಿಕೆ .ಮತ್ತೊಂದೆಡೆ ಉದ್ಘಾಟನೆ ಗೊಳ್ಳಲು ಸಿದ್ದವಾಗುತ್ತಿರುವ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆ 550 ವರ್ಷದ ಇತಿಹಾಸ ಹೊಂದಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇ ವರ್ಷಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೆರಳಿದ್ದಾರೆ.
ಶ್ರೀರಾಮನ ಪ್ರತಿಮೆ ಹಾಗೂ ಥೀಮ್ ಪಾರ್ಕ್, 3ಡಿ ಪ್ರೊಜೆಕ್ಷನ್ ಅನಾವರಣಗೊಳಿಸಲಿದ್ದಾರೆ. ಇದಕ್ಕಾಗಿ ಗೋವಾದ ಪೋಯಿಂಗ್ವಿನಿಂ ನಲ್ಲಿ ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಗೌಡಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಮಠ ಐತಿಹಾಸಿಕ ಹಿನ್ನಲೆ ಹೊಂದಿದ ಮಠವಾಗಿದೆ. 13 ನೇ ಶತಮಾನದಲ್ಲಿ ಮದ್ವಾಚಾರ್ಯರು ಸ್ಥಾಪಿಸಿದ ಈ ಮಠ ವೈಷ್ಣವ ಸಂಪ್ರದಾಯದ ದ್ವೈತ ಕ್ರಮವನ್ನು ಅನುಸರಿಸುತ್ತದೆ.
ಇದನ್ನೂ ಓದಿ : BBK 12 : ನನ್ನಲ್ಲಿ ಬುದ್ಧಿವಂತಿಕೆ ಇಲ್ಲ! ಅಂತೂ ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ



















