ನವದೆಹಲಿ: ಇಂಡಿಯಾ ಒಕ್ಕೂಟ ಗೆಲುವು ಸಾಧಿಸಿದರೆ ಜೈಲಿನಿಂದ ಮಾರನೇ ದಿನವೇ ನಾನು ಹೊರಗೆ ಬರುತ್ತೇನೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ತಿಹಾರ್ ಜೈಲಿನಲ್ಲಿ ನಾನಿರುವ ಸೆಲ್ ನಲ್ಲಿ ಎರಡು ಕ್ಯಾಮೆರಾ ಅಳವಡಿಸಲಾಗಿತ್ತು. ಅವುಗಳನ್ನು 13 ಜನ ಅಧಿಕಾರಿಗಳು ವೀಕ್ಷಿಸುತ್ತಿದ್ದರು. ಸಿಸಿಟಿವಿ ವಿಡಿಯೋಗಳನ್ನು ಪ್ರಧಾನಮಂತ್ರಿ ಕಚೇರಿಗೆ ನೀಡಲಾಗಿದೆ. ಮೋದಿ ಅವರು ನನ್ನ ಮೇಲೆ ನಿಗಾ ಇಡುತ್ತಿದ್ದಾರೆ. ಪ್ರಧಾನಿಗೆ ನನ್ನ ಮೇಲೆ ದ್ವೇಷವಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ (Narendra Modi) ಕೇಜ್ರಿವಾಲ್ ಖಿನ್ನತೆಗೆ ಒಳಗಾಗಿದ್ದಾರಾ ಇಲ್ಲವಾ ಎಂದು ನೋಡಲು ಬಯಸಿದ್ದರು. ಆದರೆ, ನಾನು ಖಿನ್ನತೆಗೆ ಒಳಗಾಗಿಲ್ಲ. ನನಗೆ ಹನುಮಂತನ ಆಶೀರ್ವಾದ ಇದೆ. ನಾನು ಜೂನ್ 4ರಂದು ಜೈಲಿನಲ್ಲಿಯೇ ಚುನಾವಣಾ ಫಲಿತಾಂಶ ನೋಡುತ್ತೇನೆ. ಇಂಡಿಯಾ ಬ್ಲಾಕ್ ಗೆದ್ದರೆ ನಾನು ಮತ್ತೆ ಜೂನ್ 5 ರಂದು ಹೊರಬರುತ್ತೇನೆ. ಆದರೆ ನಾವು ಈಗ ಕಷ್ಟಪಟ್ಟು ಕೆಲಸ ಮಾಡದಿದ್ದರೆ ನಾವು ಯಾವಾಗ ಮತ್ತೆ ಭೇಟಿಯಾಗಬಹುದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮದ್ಯ ಹಗರಣದಲ್ಲಿ ವಿಚಾರಣೆಯಲ್ಲಿದ್ದಾರೆ. ಸದ್ಯ ಮಧ್ಯಮಂತರ ಜಾಮೀನು ಸಿಕ್ಕಿದ್ದು, ಜೂನ್ 2ರಂದು ಮತ್ತೆ ಜೈಲಿಗೆ ತೆರಳಲಿದ್ದಾರೆ.