ಧಾರವಾಡ : ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದು ಕೇಂದ್ರ ಸಚಿವ ನೀತಿನ್ ಗಡ್ಕರಿ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಜೋಶಿ, ಗಡ್ಕರಿ ಅವರ ಭಾಷಣ ನಾನು ನೋಡಿಲ್ಲ. ಅವರು ಬಲಿಷ್ಠ ಮಂತ್ರಿ. ಅವರಿಗೆ ಸಾಕಷ್ಟು ಅನುಭವ ಕೂಡ ಇದೆ. ಅವರು ಹೇಳಿದ ಎಲ್ಲ ಸಂಗತಿ ಹೊರಗೆ ಬಂದಿಲ್ಲ. ಯಾವ ಹಂತದಲ್ಲಿ ಏನು ಹೇಳಿದ್ದಾರೆ? ಅನ್ನೊದು ಹೊರಗೆ ಬಂದಿಲ್ಲ. ಆದರೆ ವರ್ಲ್ಡ್ ಬ್ಯಾಂಕ್ ಐಎಂಎಫ್ ಬಗ್ಗೆ ಕೂಡ ಹೇಳಿದ್ದಾರೆ. 25 ಕೋಟಿಗಿಂತ ಹೆಚ್ಚು ಜನರು ಎಕ್ಸ್ಟ್ರೀಮ್ ಪಾವರ್ಟಿ ಲೆವೆಲ್‌ನಿಂದ ಹೊರಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಗಡ್ಕರಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದನ್ನು ನೋಡಿಕೊಂಡು ನಾನು ಪ್ರತಿಕ್ರಿಯಿಸುತ್ತೇನೆ ಎಂದು ಅವರು ಉತ್ತರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಿರುವುದರ ಬಗ್ಗೆ ಆರೆಸ್ಸೆಸ್ ನಲ್ಲಿ ಯಾವುದೇ ಚರ್ಚೆಯಾಗಿಲ್ಲ. ಮೋದಿಯವರ ವಯಸ್ಸಿನ ಬಗ್ಗೆ ಚರ್ಚೆಯ ಪ್ರಶ್ನೆಯೇ ಬಂದಿಲ್ಲ ಎಂದಿದ್ದಾರೆ.