ಚಿತ್ರದುರ್ಗ : ಚಿತ್ರದುರ್ಗದ ಸಂತೆ ಮೈದಾನ ಬಳಿಯ ಮೊಬೈಲ್ ಶಾಪ್‌ನಲ್ಲಿ ಮಾಲೀಕನಿಗೆ ಅನ್ಯಕೋಮಿನ ಯುವಕ ಚಾಕು ಇರಿದಿದ್ದು, ಶಾಪ್ ಮಾಲೀಕ ವಿಕ್ರಮ್ ಚೌದ್ರಿ ಗಂಭೀರ ಗಾಯಗೊಂಡಿದ್ದಾರೆ.
ಮೊಬೈಲ್ ಶಾಪ್‌ಗೆ ಅನ್ಯಕೋಮಿನ ಯುವಕ ಸ್ಕ್ರೀನ್‌ಗಾರ್ಡ್ ಬದಲಾವಣೆಗಾಗಿ ಬಂದಾಗ, 100 ರೂ. ಹೆಚ್ಚುವರಿ ಹಣವನ್ನು ಕೊಡುವುದಾಗಿ ವಿಕ್ರಮ್ ಕೇಳಿದ್ದನು. ಇದನ್ನು ಒಪ್ಪದ ಯುವಕ, ವಿಕ್ರಮ್‌ಗೆ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಗಾಂಜಾದ ಮತ್ತಿನಲ್ಲಿ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಗಾಯಾಳು ವಿಕ್ರಮ್ ಚೌದ್ರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ನಾಳೆ ಹಿಂದೂ ಪರ ಸಂಘಟನೆ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ವಿಕ್ರಮ್ ಸಂಘದ ಜೊತೆ ಗುರುತಿಸಿಕೊಂಡಿರುವುದು ದಾಳಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರಿಗೆ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ. ಪ್ರಕರಣ ಸಂಬಂಧ, ನಾಳೆ ನಗರ ಬಂದ್ ಎಚ್ಚರಿಕೆಯೂ ಹೊರಡಿಸಲಾಗಿದೆ.
ಇದನ್ನೂ ಓದಿ : ನಮ್ಮ ಮೆಟ್ರೋ ವಿರುದ್ಧ ಉದ್ಯಮಿ ಮೋಹನ್ ದಾಸ್ ಪೈ ಆಕ್ರೋಶ



















