ರಾಯಚೂರು: ಮಸ್ಕಿ(Maski) ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಪುತ್ರ ಮತ್ತು ಸಹೋದರ ಮೊಲಗಳ(Rabbit) ಬೇಟೆಯಾಡಿ ವಿಜೃಂಭಿಸಿರುವ ಘಟನೆ ವೈರಲ್ ಆಗಿದೆ.
ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ಶಾಸಕನ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿ ಮಾರಕಾಸ್ತ್ರ ಹಿಡಿದು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಶಾಸಕ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಹಾಗೂ ಪುತ್ರ ಸತೀಶ್ ಗೌಡ ಮೊಲ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಣೆ ನಡೆಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ.
ಮೊಲಗಳ ಬೇಟೆಯಾಡುವುದು ಅರಣ್ಯ ಇಲಾಖೆ ಕಾಯ್ದೆಯಡಿ ಅಪರಾಧ ಕೃತ್ಯವಾದರೂ ಇಲ್ಲಿಯವರೆಗೆ ಅರಣ್ಯ ಇಲಾಖೆಯಿಂದ ಯಾವುದೇ ಕ್ರಮ ಜರುಗಿಸಿಲ್ಲ ಎನ್ನಲಾಗಿದೆ.