ರೇಡಿಯೋ ಕುಂದಾಪ್ರ 89.6 FMನಲ್ಲಿ “ನಿಮ್ಮ ಪ್ರಶ್ನೆಗಳಿಗೆ ನಮ್ಮ ಧ್ವನಿ” ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ಭಾಗವಹಿಸಿದ್ದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವಾರು ಸಮಸ್ಯೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ನಾವು ಸದಾ ಜನರ ಸಂಪರ್ಕದಲ್ಲೇ ಇರುತ್ತೇವೆ. ಆದರು ಕೂಡ ಕಾರಣಾಂತರಗಳಿಂದ ಕೆಲವರನ್ನು ತಲುಪಲು ಸಾಧ್ಯವಾಗುವುದಿಲ್ಲ. ಶಾಸಕನಾಗಿ ಬೈಂದೂರಿನ ಪ್ರತಿ ಪ್ರಜೆಯನ್ನು ತಲುಪಬೇಕೆನ್ನುವುದು ನನ್ನ ಆಶಯ. ಆ ಒಂದು ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮದಲ್ಲಿ ಒಂದಿಷ್ಟು ಹೊಸಬರ ಜೊತೆ ಮಾತನಾಡಿರುವುದು ಖುಷಿ ತಂದಿದೆ.
ಜನರು ಕೆಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಕೆಲವು ಪ್ರಶ್ನೆಗಳು ಆಳವಾಗಿದ್ದರಿಂದ ಹೆಚ್ಚಿನ ಮಾಹಿತಿ ತಿಳಿದು ಉತ್ತರಿಸುವೆ. ಬೈಂದೂರಿನ ಜನತೆ ಇನ್ನೂ ಹೆಚ್ಚಿನ ಸಮಯ ಈ ಒಂದು ರೇಡಿಯೋ ಕಾರ್ಯಕ್ರಮಕ್ಕೆ ನೀಡಬೇಕು ಅಂತ ನಿರೀಕ್ಷೆ ಮಾಡಿದ್ದಲ್ಲಿ ಖಂಡಿತ ನಾನು ತಯಾರಿದ್ದೇನೆ ಎಂದು ಹೇಳಿದ್ದಾರೆ



















