ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (vinay kulkarni) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಈಗ ಆರೋಪ ಮಾಡಿರುವ ಮಹಿಳೆಯ ಮೇಲೆಯೇ ದೂರು ನೀಡಿದ್ದಾರೆ.
ಅಲ್ಲದೇ, ಖಾಸಗಿ ಚಾನೆಲ್ ಮುಖ್ಯಸ್ಥನ ವಿರುದ್ಧ ಬ್ಲ್ಯಾಕ್ಮೇಲ್ (Blackmail) ಆರೋಪದ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಎರಡು ಎಫ್ ಐಆರ್ ದಾಖಲಿಸಿಕೊಂಡಿರುವ ಸಂಜಯನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ, ಆರೋಪಕ್ಕೆ ಸಾಕ್ಷಿ ನೀಡುವಂತೆ ನೋಟಿಸ್ ನೀಡಲಾಗಿದೆ.
ಆದರೆ, ಇಲ್ಲಿಯವರೆಗೆ ಸಂತ್ರಸ್ತೆ, ಕುಲಕರ್ಣಿಯಿಂದ ಯಾವುದೇ ಸಾಕ್ಷಿ ಒದಗಿ ಬಂದಿಲ್ಲ. ಕರೆ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ವಿನಯ್ ದೂರು ನೀಡಿದ್ದಾರೆ. ಖಾಸಗಿ ಚಾನೆಲ್ ಮುಖ್ಯಸ್ಥನ ವಿರುದ್ಧ ವಿನಯ್ ಕುಲಕರ್ಣಿ ಗಂಭೀರ ಆರೋಪ ಮಾಡಿದ್ದಾರೆ. ಕರೆ ಬಂದ ಮೊಬೈಲ್ ನಂಬರ್ ಯಾರ ಹೆಸರಲ್ಲಿದೆ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆಡಿಯೋ ಇದ್ದರೆ ಒದಗಿಸುವಂತೆ ಕೇಳಿದ್ದಾರೆ.
ಅಧಿಕಾರಿಗಳು, ರಾಜಕೀಯ ಮುಖಂಡರಿಗೆ ಮಹಿಳೆ ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.
ಅಲ್ಲದೇ, ಪೂರಕ ದಾಖಲೆ ಒದಗಿಸುವಂತೆ ಸಂತ್ರಸ್ತ ಮಹಿಳೆಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿನಯ ಕುಲಕರ್ಣಿ, ನನ್ನ ವಿರುದ್ಧದ ಷಡ್ಯಂತ್ರ ಇದು. ನಾನು ಆ ಮಹಿಳೆಯನ್ನು ಮುಟ್ಟಿದ್ದರೆ ನನ್ನ ತಾಯಿಯನ್ನು ಮುಟ್ಟಿದ ಹಾಗೆ. ಕೇವಲ ಎರಡು-ಮೂರು ಸಲ ನಡೆದ ವಿಡಿಯೋ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.