ಅಧಿಕಾರಿಯ ಭ್ರಷ್ಟಾಚಾರಕ್ಕೆ ಬೇಸತ್ತ ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರ ಕಾಲಿಗೆ ಬೀಳುತ್ತೇನೆ ಎಂದು ಕೈ ಮುಗಿದಿರುವ ಪ್ರಸಂಗ ನಡೆದಿದೆ.
ದಾವಣಗೆರೆ ಜಿಲ್ಲೆ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ, ಪಾಲಿಕೆ ಆಯುಕ್ತರ ಮೇಲೆ ಲಂಚದ ಆರೋಪ ಮಾಡಿದ್ದಾರೆ. ಪೌರ ಕಾರ್ಮಿಕರು ಕೆಲಸಕ್ಕೆ ಸೇರಲು 2 ಲಕ್ಷ ರೂ. ನೀಡಬೇಕು. ಖಾಯಂ ಮಾಡಿಕೊಳ್ಳಲು 3 ಲಕ್ಷ ರೂ. ಹಣ ನೀಡಬೇಕು. ಇದಕ್ಕೆಲ್ಲ ಬಡವರು ಎಲ್ಲಿಂದ ಹಣ ತರಬೇಕು ಹೇಳಮ್ಮ ಎಂದು ಪ್ರಶ್ನಿಸಿದ್ದಾರೆ.
ಕೆಲಸ ಕಾಯಂ ಮಾಡಿಕೊಳ್ಳಲು ಈಗಾಗಲೇ ಅವರು 10 ರೂಪಾಯಿ ಬಡ್ಡಿಯಂತೆ ಸಾಲ ಕೇಳಲು ಶುರು ಮಾಡಿದ್ದಾರೆ. ದಯವಿಟ್ಟು ಕೈ ಮುಗಿದು ಕಾಲಿಗೆ ಬೀಳುತ್ತೆನಮ್ಮ ಪಾಲಿಕೆಯಲ್ಲಿ ದುಡ್ಡು ವಸೂಲಿ ಮಾಡೋದು ನಿಲ್ಸಮ್ಮ ಅಂತ ಶಾಸಕರು ಬೇಡಿಕೊಂಡಿದ್ದಾರೆ.