ಕಾರವಾರ: ವಿದ್ಯಾರ್ಥಿಗಳಿಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಕೃಷಿ ಪಾಠ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಗಾಂವ್ ಶಾಸಕರ ಸ್ವಂತ ಊರು. ಅಲ್ಲಿನ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಶಾಸಕರು ಪಾಠ ಮಾಡಿದ್ದಾರೆ. ರಾಷ್ಟ್ರೀಯ ಸೇವಾ ಸಂಘದ ಶಿಬಿರದಲ್ಲಿರುವ ವಿಧ್ಯಾರ್ಥಿಗಳನ್ನು ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಕೃಷಿಯ ಮಹತ್ವ ಸಾರಿದ್ದಾರೆ.ತಮ್ಮ ತೋಟದಲ್ಲಿ ಬೆಳೆದ ಬೆಳೆಗಳ ಪರಿಚಯ, ಕೃಷಿಯ ಮಹತ್ವ, ರೈತಾಪಿ ಜೀವನದ ಕುರಿತು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.