ಬೆಂಗಳೂರು: ಕಾಣೆಯಾಗಿದ್ದ 7 ವರ್ಷದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ ಸರ್ಜಾಪುರದ ಮಟ್ನಳ್ಳಿ(Matnalli of Sarjapur) ಕೆರೆಯಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಎಲ್ವಿನ್ ಡಿಸೋಜಾ ಕಾಣೆಯಾಗಿದ್ದ ಬಾಲಕ ಎನ್ನಲಾಗಿದೆ. ಈತ ಜ. 16 ರಂದು ಮನೆಯಿಂದ ಸೈಕಲ್ ನಲ್ಲಿ ಹೊರಗೆ ಹೋದವ ಮತ್ತೆ ಮನೆಗೆ ಬಂದಿರಲಿಲ್ಲ.
ಎಲ್ವಿನ್ ಡಿಸೋಜಾ ಕೆರೆಯಲ್ಲಿ ನೀರು ನೋಡಿ ಈಜಲು ಇಳಿದಿದ್ದು, ಆ ವೇಳೆ ಮುಳಿಗು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಬಾಲಕ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಪರಿಶೀಲನೆ ವೇಳೆ ಕೆರೆಯಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳೀಯರು ಬಾಲಕನ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


















