ಚಾಮರಾಜನಗರ : ದುರಾಡಳಿತವೇ ಹೆಚ್ಚಾಗಿದೆ, ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡೂವರೆ ಲಕ್ಷ ಸರ್ಕಾರಿ ಹುದ್ದೆ ಖಾಲಿಯಿದೆ. ಈ ಹುದ್ದೆಗಳ ಭರ್ತಿ ಮಾಡದೆ ಬೇರೆ ಬೇರೆ ಸಬೂಬು ಹೇಳ್ತಿದ್ದಾರೆ. ಉದ್ಯೋಗ ಕೊಡೋದು ಸರ್ಕಾರದ ಜವಾಬ್ದಾರಿ. ಕೇಂದ್ರ ಸರ್ಕಾರ ಉದ್ಯೋಗ ಕೊಡ್ತಾ ಅಂತಾ ಹೇಳ್ತಾರೆ. ಅವರು ಕೊಟ್ಟಿಲ್ಲ,ನಾವು ಕೊಡೋಲ್ಲ ಅನ್ನೋದು ಸರಿಯಲ್ಲ. ಕುರ್ಚಿ ಕಿತ್ತಾಟದಲ್ಲಿ ಎರಡೂವರೆ ವರ್ಷ ವ್ಯರ್ಥವಾಗಿದೆ. ಅಧಿಕಾರ ಹಂಚಿಕೆ ವಿಚಾರ ಈಗಲಾದರೂ ಸರಿಪಡಿಸಿಕೊಳ್ಳಲಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮಾತನಾಡಿ, ಮೈತ್ರಿ ಮಾಡಿಕೊಂಡಿದ್ದಕ್ಕೆ ಜೊತಗಿದ್ದೇವೆ, ಇರ್ತೇವೆ.
ಈ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕು, ಒಳ್ಳೆಯ ಸರ್ಕಾರ ನೀಡಲು ಸಹಕಾರ ಅಗತ್ಯ. ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಹೆಚ್ಚಾಗಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿ, ಯಾವ ರೀತಿ ಈ ಕಮಿಷನ್ ದಂಧೆ ನಡೀತಿದೆ ಎಂದು ನನಗೆ ಮಾಹಿತಿ ಇದೆ, ನಾನು ಸಿಎಂ ಆಗಿದ್ದ ವೇಳೆ ಪ್ರತಿ ತಿಂಗಳು ಸರಿಯಾಗಿ ಹಣ ಬಿಡುಗಡೆ ಆಗ್ತಿತ್ತು. ನನ್ನ ಕಾಲದಲ್ಲಿ ಯಾರೂ ಕಮಿಷನ್ ಆರೋಪ ಮಾಡಲಿಲ್ಲ. ಇವತ್ತು ಗುತ್ತಿಗೆದಾರರು ಸಾಲ ಮಾಡಿಕೊಂಡು ಬ್ಯಾಂಕಿನಲ್ಲಿ ಒಡವೆ ಅಡವಿಟ್ಟು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಕಾಂಗ್ರೆಸ್ ಸರ್ಕಾರ ಮಾಡ್ತಿರೋದೇನು? ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ-ವಿಜಯ್ ದೇವರಕೊಂಡ | ಉದಯಪುರದಲ್ಲಿ ‘ವಿರೋಶ್’ ಅದ್ಧೂರಿ ವಿವಾಹ!



















