ಬೆಂಗಳೂರು: ಕೊತ್ತಲವಾಡಿ ಸಿನಿಮಾದ ಬಗ್ಗೆ ಅಪಪ್ರಚಾರ ಹಿನ್ನೆಲೆ ಪಿಆರ್‌ಒ ಹರೀಶ್ ಅರಸು ಸೇರಿ ಐವರ ವಿರುದ್ಧ ನಟ ಯಶ್ ತಾಯಿ ಪುಷ್ಪಾ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ವರ್ಣಗೌರಿ ಹಾಗೂ ಪಿಆರ್‌ಒ ಹರೀಶ್ ಸೇರಿ ಇತರರ ವಿರುದ್ಧ ದೂರು ನೀಡಲಾಗಿದೆ. ಕೊತ್ತಲವಾಡಿ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿ ಕೊಟ್ಟ ಹಣ ಸರಿಯಾಗಿ ಉಪಯೋಗ ಪಡಿಸಿಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎ1 ಹರೀಶ್ ಅರಸು, ಎ2 ಮನು, ಎ3 ನಿತಿನ್, ಎ4 ಮಹೇಶ್ ಗುರು, ಎ5 ಸ್ವರ್ಣಗೌರಿ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಸ್ವರ್ಣಗೌರಿಗೆ ಹೈಗ್ರೌಂಡ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ : ವಿಧಾನಸೌಧ ಮುಂಭಾಗ ನೇಪಾಳಿ ಯುವಕರ ಮಾರಮಾರಿ | ವಿಡಿಯೋ ವೈರಲ್


















