ಮಂಗಳೂರು: ಹೊರವಲಯದಲ್ಲಿನ ಮಸೀದಿಯೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಜಿಲ್ಲೆಯ ಸುರತ್ಕಲ್ (Suratkal) ಹತ್ತಿರದ ಕಾಟಿಪಳ್ಳ (Katipalla) 3ನೇ ಬ್ಲಾಕಿನ ಬದ್ರಿಯಾ ಮಸೀದಿಯಲ್ಲಿ ನಡೆದಿದೆ.
ಮಂಗಳೂರು (Mangaluru) ಹೊರವಲಯದ ಕಾಟಿಪಳ್ಳ 3ನೇ ಬ್ಲಾಕ್ ನ ಬದ್ರಿಯಾ ಮಸೀದಿ ಮೇಲೆ ದುಷ್ಕರ್ಮಿಗಳ ತಂಡವೊಂದು ಕಲ್ಲು ತೂರಾಟ ನಡೆಸಿದೆ ಎನ್ನಲಾಗಿದೆ.
ಬೈಕ್ ನಲ್ಲಿ ಬಂದಿದ್ದ ಕಿಡಿಗೇಡಿಗಲು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಪರಿಣಾಮ ಕಲ್ಲಿನ ಹೊಡೆತಕ್ಕೆ ಮಸೀದಿಯ ಗಾಜು ಒಡೆದಿದೆ. 2 ಬೈಕ್ ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಭಜರಂಗದಳ ಹಾಗೂ ವಿಹೆಚ್ ಪಿಯಿಂದ ಬಿ.ಸಿ.ರೋಡ್ (BC Road) ಚಲೋ ಕರೆ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಿ.ಸಿ.ರೋಡ್‌ನಲ್ಲಿ ಜಮಾಯಿಸಿದ್ದಾರೆ. ಬಿ.ಸಿ.ರೋಡ್‌ನ ರಕ್ತೇಶ್ವರಿ ದೇವಸ್ಥಾನದ ಎದುರು ಸೇರಿದ ಕಾರ್ಯಕರ್ತರು ನಾವು ಸವಾಲು ಸ್ವೀಕರಿಸಿ ಬಂದಿದ್ದೇವೆ. ನಮ್ಮ ಮುಖಂಡ ಶರಣ್ ಪಂಪ್ವೆಲ್ ಬರುತ್ತಾರೆ ಅವರಿಗೆ ಸ್ವಾಗತ ಕೋರಲು ಬಂದಿರುವುದಾಗಿ ಹೇಳಿದ್ದಾರೆ.