ಅಮೃತಸರ: ಅಮೃತಸರದ ಖಂಡ್ವಾಲಾದ ದೇವಾಲಯದ ಮೇಲೆ ದುಷ್ಕರ್ಮಿಗಳಿಬ್ಬರು ಗ್ರೆನೇಡ್ ಎಸೆದಿದ್ದಾರೆ.
ಮೋಟಾರ್ ಸೈಕಲ್ ನಲ್ಲಿ ಬಂದಿದ್ದ ಇಬ್ಬರು ಪಾಪಿಗಳು ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ. ಠಾಕೂರ್ದ್ವಾರ ದೇವಾಲಯದ ಮೇಲೆ ನಡೆದ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಮಾರ್ಚ್ 14-15ರ ಮಧ್ಯರಾತ್ರಿ ನಡೆದಿದೆ. ಆದರೆ, ಈ ವೇಳೆ ಯಾವುದೇ ಸಾವು- ನೋವುಗಳು ವರದಿಯಾಗಿಲ್ಲ. ಸಿಸಿಟಿವಿ ದೃಶ್ಯಗಳಲ್ಲಿ ಧ್ವಜವನ್ನು ಹೊತ್ತ ಇಬ್ಬರು ಯುವಕರು ದೇವಸ್ಥಾನದ ಹೊರಗೆ ಸ್ವಲ್ಪ ಹೊತ್ತು ನಿಂತು ಆವರಣದ ಕಡೆಗೆ ವಸ್ತುವನ್ನು ಎಸೆಯುವ ಮೊದಲು ಅವರು ಸ್ವಲ್ಪ ಸಮಯ ದೇವಸ್ಥಾನದ ಹೊರಗೆ ನಿಂತಿದ್ದಾರೆ. ಆನಂತರ ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಅವರು ಹೋದ ನಂತರ ಪ್ರಬಲ ಸ್ಫೋಟ ಸಂಭವಿಸಿದೆ. ಅರ್ಚಕರು ಸೇರಿದಂತೆ ಸುತ್ತಮುತ್ತಲಿನವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.



















