ಹುಬ್ಬಳ್ಳಿ : ಬಡ್ಡಿ ವ್ಯವಹಾರ ಸಂಬಂಧ ಆಟೋ ಅಡ್ಡಗಟ್ಟಿ ಸ್ಟಿಕ್‌ಗಳಿಂದ ಮೂರ್ನಾಲ್ಕು ಜನ ಸೇರಿ ಓರ್ವ ಚಾಲಕನಿಗೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಮನೋಜ ಪಾರ್ಕ್ ಬಳಿ ನಡೆದಿದೆ.
ಮಹ್ಮದ್ ಗೌಸ್ ಹಲ್ಲೆಗೊಳಗಾದ ವ್ಯಕ್ತಿ. ಸೆಟಲ್ಮೆಂಟ್ ರಾಮು ಹಾನಗಲ್ ಎಂಬುವವನ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಡ್ಡಿ ವ್ಯವಹಾರ ಮಾಡ್ತಿದ್ದ ರಾಮು ಬಳಿ ಮಹ್ಮದ್ 7 ಲಕ್ಷ ಸಾಲ ಪಡೆದಿದ್ದ. ಕೆಲ ದಿನಗಳ ಬಳಿಕ ಮಹ್ಮದ್ ಆ ಸಾಲವನ್ನು ಮರುಪಾವತಿ ಮಾಡಿದ್ದ, ಆದರೂ ಕೂಡ ಹೆಚ್ಚುವರಿಯಾಗಿ 2.50 ಲಕ್ಷ ರೂ ನೀಡುವಂತೆ ರಾಮು ಕೇಳಿದ್ದಾನೆ. ಆಗ ಮಹ್ಮದ್ ಹಣ ನೀಡದ ಹಿನ್ನೆಲೆ ರಾಮು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಇದೇ ಸಂಬಂಧ ಇಂದು ಬೆಳಿಗ್ಗೆ ಎರಡು ಆಟೋಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಮಹ್ಮದ್‌ನ ಆಟೋ ಅಡ್ಡಗಟ್ಟಿ ಹಲ್ಲೆ ಮಾಡಿದ ಕಿಡಿಗೇಡಿಗಳು ಆತನ ಕಾಲು ಮುರಿದಿದ್ದಾರೆ. ಸದ್ಯ ಗಾಯಾಳು ಮಹ್ಮದ್‌ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಮ್ಸ್ ಆಸ್ಪತ್ರೆಗೆ ಕೇಶ್ವಾಪುರ ಇನ್ಸ್ಪೆಕ್ಟರ್ ಕರೆಪ್ಪ ಹಟ್ಟಿ ಭೇಟಿ ನೀಡಿ, ಗಾಯಾಳು ಹಾಗೂ ಕುಟುಂಬಸ್ಥರ ಬಳಿ ಮಾಹಿತಿ ಪಡೆದಿದ್ದಾರೆ. ಈ ಘಟನಾ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಗಿಳಿಶಾಸ್ತ್ರ ಹೇಳಿ ಐಟಿ ಅಧಿಕಾರಿಗೆ 35 ಲಕ್ಷ ರೂ. ವಂಚಿಸಿದವನ ಬಂಧನ!



















