ಬೆಂಗಳೂರು: ಹಣಕಾಸು ಚಟುವಟಿಕೆಗಳು, ತೆರಿಗೆ ಸೇರಿ ಹಲವು ರೀತಿಯ ವಿತ್ತೀಯ ಚಟುವಟಿಕೆಗಳ ದೃಷ್ಟಿಯಿಂದ ಜನ ಪ್ಯಾನ್ ಕಾರ್ಡ್ ಮಾಡಿಸುತ್ತಾರೆ. ಆದರೆ, ಪ್ಯಾನ್ ಕಾರ್ಡ್ ಪಡೆಯಲು ನಿರ್ದಿಷ್ಟ ವಯಸ್ಸಿನ ಮಿತಿ ಇಲ್ಲ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ. ಹಾಗಾಗಿ, 18 ವರ್ಷದೊಳಗಿನವರು ಕೂಡ ಪ್ಯಾನ್ ಕಾರ್ಡ್ ಮಾಡಿಸಬಹುದಾಗಿದೆ. ಹಾಗಾದರೆ, ಅಪ್ರಾಪ್ತರು ಕೂಡ ಹೇಗೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ.
ಅಪ್ರಾಪ್ತ ವಯಸ್ಕರು ಖುದ್ದಾಗಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆದರೆ, ಮಕ್ಕಳ ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಮಕ್ಕಳು ಭಾರತದಲ್ಲಿ ವಾಸಿಸುತ್ತಿರಲಿ ಅಥವಾ ಅನಿವಾಸಿ ಭಾರತೀಯರಾಗಿರಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್ ಸೈಟ್ ಆಗಿರುವ www.protean-tinpan.com ಗೆ ಭೇಟಿ ನೀಡಬೇಕು
- apply for a new PAN card ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು
- ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
- ನಂತರ ಪೇಮೆಂಟ್ ಮಾಡಬೇಕು
- ಇದಾದ ಬಳಿಕ ಆಧಾರ್ ಪ್ರಮಾಣೀಕರಣ ಪೂರ್ಣಗೊಳಿಸಬೇಕು.
- ಹಾಗೊಂದು ವೇಳೆ, ಭೌತಿಕ ದಾಖಲೆ ಪರಿಶೀಲನೆಯನ್ನು ಆರಿಸಿಕೊಂಡರೆ, ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ದಾಖಲೆಗಳನ್ನು NSDL ಪ್ರೊಟೀನ್ ಅಥವಾ UTIITSL ವಿಳಾಸಕ್ಕೆ ಕಳುಹಿಸಬೇಕು.