ಕೋಲಾರ : ಅಪ್ರಾಪ್ತ ಬಾಲಕಿಯ ಮೇಲೆ ಅನ್ಯಕೋಮಿನ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ. ಮಾಲೂರು ತಾಲೂಕಿನ ಹುಡದೇನಹಳ್ಳಿ ನಿವಾಸಿ ನವಾಜ್ ಯುವತಿಯನ್ನು ಪುಸಲಾಯಿತಿ ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ.
17 ವರ್ಷದ ಬಾಲಕಿಯ ಮೇಲೆ ನವಾಜ್ ಎಂಬಾತ ಅತ್ಯಾಚಾರ ಮಾಡಿದ್ದಾನೆ. ಕೂಲಿ ಕಾರ್ಮಿಕರ ಕುಟುಂಬದಲ್ಲಿದ್ದ ಬಾಲಕಿಯೊಂದಿಗೆ ನವಾಜ್ ಸ್ನೇಹ ಬೆಳೆಸಿದ್ದ. ಆ ಹಿನ್ನೆಲೆಯಲ್ಲಿ ಬಾಲಕಿಯನ್ನು ಮನವೊಲಿಸಿ ನವಾಜ್ ಆಕೆಯನ್ನು ಕಿಡ್ನಾಪ್ ಮಾಡಿದ್ದಾನೆ. ಬಳಿಕ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಕಿಯ ತಂದೆಗೂ ನವಾಜಗ ಪರಿಚಯವಿದ್ದ. ಆಗಸ್ಟ್ 15 ರಂದು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಗಿಸಿದ್ದ ಬಾಲಕಿ, ನಂತರ ನವಾಜ್ ಕರೆದ ಎಂದು ಜೊತೆಗೆ ಹೋಗಿದ್ದಾಳೆ. ಮಾಲೂರು ಬಳಿಯ ಶೆಡ್ ಒಂದಕ್ಕೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ.
ರಾತ್ರಿ ಇಡೀ ಆಕೆಯ ಜೊತೆಯಲ್ಲಿದ್ದು ಅತ್ಯಚಾರ ಮಾಡಿದ್ದಾನೆನ್ನಲಾಗಿದೆ. ನಂತರ ಸಹ ಮರು ದಿನವೂ ಕೂಡ ಭಯಪಟ್ಟು ಅಲ್ಲಿಂದ ವಾಪಾಸ್ಸಾಗಿರಲಿಲ್ಲ. ಬಾಲಕಿಯ ಪೋಷಕರು ಮಗಳು ಕಾಣೆಯಾಗಿದ್ದ ಬಗ್ಗೆ ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದರು.
ಕೆಲವು ದಿನಗಳ ಬಳಿಕ ನವಾಜ್ ನನ್ನು ಹಿಡಿದು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಆದಾಗ್ಯೂ ಪೊಲೀಸ್ ವಿಚಾರಣೆಯ ವೇಳೆಯಲ್ಲೂ ನವಾಜ್ ನಾಟಕವಾಡಿದ್ದನೆನ್ನಲಾಗಿದೆ. ಮಾತ್ರವಲ್ಲದೇ, ಎದೆ ನೋವು ಎಂದು ಆಸ್ಪತ್ರೆಗೂ ಕೂಡ ದಾಖಲಾಗಿದ್ದ.
ಬಳಿಕ ಬಾಲಕಿ ಎಲ್ಲಿದ್ದಾಳೆ ಎಂದು ವಿಚಾರಿಸಿದಾಗ, ಹೋಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆಂದು ಬಾಯ್ಬಿಟ್ಟಿದ್ದಾನೆ. ಬಳಿಕ ಬಾಲಕಿ ಕೆಲಸ ಮಾಡುತ್ತಿದ್ದ ಜಾಗ ತೋರಿಸಿದ್ದಾನೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಹೊಸಕೋಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.



















