ಬೆಂಗಳೂರು : ಅಪ್ರಾಪ್ತ ಮಗಳು ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.
ಅಪ್ರಾಪ್ತ ಮಗಳಿಂದ ಕೊಲೆಯಾದ ಮಹಿಳೆ ನೇತ್ರಾವತಿಗೆ 35 ವರ್ಷ. ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪೋಲಿಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿದ್ದರು. ನಂತರ ಮೃತಳ ಅಕ್ಕ ಅನಿತಾ ಪೋಲಿಸರ ಬಳಿ ಬಂದು ತನ್ನ ತಂಗಿ ಸಾವಿನ ಬಳಿಕ ಮಗಳು ಎಲ್ಲೂ ಕಾಣುತ್ತಿಲ್ಲ ನಂತರ ಎರಡು ದಿನಗಳ ಬಳಿಕ ಆಕೆ ಕಾಣಿಸಿಕೊಂಡಿದ್ದಾಳೆ ಎಂದು ಅನುಮಾನಾಸ್ಪದ ದೂರು ನೀಡಿದ್ದಾರೆ.
ಬಳಿಕ ತನಿಖೆ ನಡೆಸಿದ ಪೋಲಿಸರು ಮಗಳಿಂದ ಕೊಲೆ ಎಂದು ಬಯಲಾಗಿದೆ. ಈಕೆ ಹೇಳಿಕೆಯ ಪ್ರಕಾರ ನಾನು ಅಂದು ತಾಯಿ ಮನೆಗೆ ಹೋಗಿದ್ದೆ ಐದು ಜನ ಸ್ನೇಹಿತರನ್ನ ಗಮನಿಸಿದೆ. ಟವಲ್ ನಲ್ಲಿ ಕುತ್ತಿಗೆ ಬಿಗಿದು ನೇಣುಹಾಕಿದ್ದನ್ನ ನೋಡಿದೆ ನಂತರ ನನ್ನ ಮೇಲೆ ಬೆದರಿಕೆ ಹಾಕಲಾಗಿತ್ತು. ಭಯಪಟ್ಟು ಪ್ರೆಂಡ್ಸ್ ಮನೆಗೆ ತೆರಳಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.
ನಾನು ಅವತ್ತು ತಾಯಿ ಮನೆಗೆ ಹೋಗಿದ್ದೆ. ಐದು ಜನ ಸ್ನೇಹಿತರನ್ನ ಗಮನಿಸಿದೆ. ಟವಲ್‌ನಲ್ಲಿ ಕುತ್ತಿಗೆ ಬಿಗಿದು ನೇಣುಹಾಕಿದ್ದನ್ನು ನೋಡಿದೆ. ನಂತರ ನನ್ನ ಮೇಲೆ ಬೆದರಿಕೆ ಹಾಕಲಾಗಿತ್ತು. ಭಯಪಟ್ಟು ಪ್ರೆಂಡ್ಸ್ ಮನೆಗೆ ತೆರಳಿದ್ದೆ ಎಂದು ಮೃತ ನೇತ್ರಾವತಿ ಮಗಳು ತಿಳಿಸಿದ್ದಳು.
ಇದೀಗ ಪ್ರಕರಣದಲ್ಲಿ ಮನೆಗೆ ಸ್ನೇಹಿತರು ಬಂದಿದ್ದಕ್ಕೆ ಪೊಲೀಸರಿಗೆ ಕರೆ ಮಾಡುವುದಾಗಿ ತಾಯಿ ಹೇಳಿದ್ದಳು. ಆಗ ಪುತ್ರಿ ಪ್ರಿಯಕರ, ಆತನ ಸ್ನೇಹಿತರ ಜೊತೆ ಸೇರಿಕೊಂಡು ತಾಯಿಯ ಹತ್ಯೆ ಮಾಡಿದ್ದಾಳೆ. ಕೊಲೆಗೈದ ಐವರು ಅಪ್ರಾಪ್ತರೆಂದು ತಿಳಿದುಬಂದಿದೆ.ಸದ್ಯ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ರೋಹಿತ್ ಶರ್ಮಾ ಕೆಕೆಆರ್ ಪಾಲು? “ಇದು ಅಸಾಧ್ಯ” ಎಂದ ಮುಂಬೈ ಇಂಡಿಯನ್ಸ್!



















