ಮಂಡ್ಯ : ಸಹಕಾರ ಸಂಘದ ಚುನಾವಣೆಯಲ್ಲಿ ಕೃಷಿ ಸಚಿವ ಚಲುವನಾರಾಯಣಸ್ವಾಮಿ ಪುತ್ರನ ಗೆಲುವಿಗಾಗಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ನಕಲಿ ಓಟ್ ನಿಂದ ಸಚಿನ್ ಚಲುವರಾಯಸ್ವಾಮಿ ಗೆದ್ದರಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸಚಿನ್ ನಾಗಮಂಗಲದ ಬ್ರಹ್ಮದೇವರಹಳ್ಳಿ ಸಹಕಾರ ಸಂಘದ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಭಾನುವಾರ ಈ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸಚಿನ್ ಗೆಲುವು ಸಾಧಿಸಿದ್ದರು.
418 ಮತಗಳ ಪೈಕಿ 258 ಮತಗಳನ್ನು ಪಡೆದು ಸಚಿನ್ ಗೆಲುವು ಸಾಧಿಸಿದ್ದರು. ಆದರೆ, ಈಗ ಸಚಿನ್ ಗೆಲುವಿನ ಬಗ್ಗೆ ಸಹಕಾರ ಸಂಘದ ಮತದಾರರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಈ ಕುರಿತು ಚರ್ಚೆಯಾಗುತ್ತಿದೆ. ಅಡ್ಡ ಮತಗಳನ್ನು ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಗೋವಿಂದಯ್ಯ ಎಂಬುವವರ ಓಟ್ ಹಾಕಲು ಬಂದಿದ್ದ ವೆಂಕಟೇಶ್ ಎಂಬುವವರನ್ನು ಜನರು ಹಿಡಿದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಇನ್ನೂ ಹಲವರಿಂದ ಈ ರೀತಿಯ ಮತದಾನ ನಡೆದಿರಬಹುದು ಎಂಬ ಸಂಶಯವನ್ನು ಮತದಾರರು ವ್ಯಕ್ತಪಡಿಸುತ್ತಿದ್ದಾರೆ.
ಕಳ್ಳ ಓಟ್ ಮಾಡಲು ಬಂದವನನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 0ವಿಡಿಯೋ ಹರಿಬಿಟ್ಟು ಚಲುವರಾಯಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಸೊಸೈಟಿ ಚುನಾವಣೆಯಲ್ಲಿ ಪ್ರಭಾವ ಬಳಸಿ ಮಗನನ್ನು ಗೆಲ್ಲಿಸಿದ್ರಿ ಎಂದು ಚಲುವರಾಯಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.