ನಮ್ಮ ಅವಧಿಯಲ್ಲಿ 104 ಡಾಲರ್ ಗೆ ಇಂಧನ ದರ ಇತ್ತು. ಆಗ ನಾವು 62 ರೂ.ಗೆ ಡೀಸೆಲ್ ಕೊಡುತ್ತಿದ್ದೇವು. ಈಗ ಬ್ಯಾರೆಲ್ ಬೆಲೆ 66 ರೂ. ಇದೆ. ಆದರೂ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಇಂಧನ ದರ ಕಡಿಮೆ ಇದ್ದರೂ ಪೆಟ್ರೋಲ್ ದರ 100ಕ್ಕೆ ಏಕೆ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸಬ್ಸಿಡಿ ಕೊಡುತ್ತಿಲ್ಲ. ಕಾರ್ಪೋರೇಟ್ ಟ್ಯಾಕ್ಸ್ ಕಡಿಮೆ ಮಾಡಿರುವುದರಿಂದ 11 ಸಾವಿರ ಕೋಟಿ ರೂ. ನಮಗೆ ನಷ್ಟವಾಗಿದೆ. ಒಬ್ಬ ವ್ಯಕ್ತಿ ಲೋನ್ ಕಟ್ಟಿಲ್ಲ ಅಂದ್ರೆ ಸರ್ಚ್ ಚಾರ್ಜ್ ಹಾಕುತ್ತಾರೆ. ಕಾರ್ಪೋರೇಟ್ ಟ್ಯಾಕ್ಸ್ ಮಾತ್ರ ಕಡಿಮೆ ಮಾಡುತ್ತಾರೆ ಎಂದು ಗುಡುಗಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿರುದ್ಧ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ಷಯ್ ಕುಮಾರ್ ಇಂಡಿಯನ್ ಸಿಟಿಜನ್ ಅಲ್ಲ ಅವನೊಬ್ಬ ಕೆನಡಿಯನ್. ಮೋದಿಯವರನ್ನ ಅಕ್ಷಯ್ ಇಂಟರ್ ವ್ಯೂ ಮಾಡಿದ್ದ ಆತ, ಕೇಳಿದ ಪ್ರಶ್ನೆ ಏನು? ಮೋದೀಜಿ ಮಾವಿನ ಹಣ್ಣು ಹೇಗೆ ತಿಂತೀರಿ? ಅದನ್ನ ಹಿಸುಕಿ ತಿಂತೀರೋ? ಅಥವಾ ಇಲ್ಲ ಕಟ್ ಮಾಡಿ ತಿಂತೀರಾ ಅಂತಾ ಪ್ರಶ್ನೆ ಕೇಳ್ತಾನೆ. ಇಂತವನು ಇನ್ನೇನು ಹೇಳೋಕೆ ಸಾಧ್ಯ ಎಂದು ಗುಡುಗಿದ್ದಾರೆ.
ನರೇಂದ್ರ ಮೋದಿ ಅಭಿವೃದ್ದಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೋದಿ ಮಾಡಿರುವ ಬ್ರಿಡ್ಜ್ ಗಳು ಉಳಿದಿವೆಯಾ? ಕಾಂಗ್ರೆಸ್ ನಿರ್ಮಿಸಿದ ಬ್ರಿಡ್ಜ್ ಗಳು 70 ವರ್ಷಗಳಿಂದ ಹಾಗೆ ಉಳಿದಿವೆ..ರೋಡ್ ಗಳು ಯಾವುದಾದ್ರೂ ಉಳಿದಿವೆಯಾ? ಉದ್ಘಾಟನೆ ಮಾಡಿ ಬರುತ್ತಲೇ ಹಾಳಾಗಿ ಹೋಗಿವೆ ಎಂದು ವ್ಯಂಗ್ಯವಾಡಿದ್ದಾರೆ.