ಚಾಮರಾಜಪೇಟೆ : ಜ. 4ರಂದು ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆದಿದ್ದು ನಾವು ಸಹಿಸಲ್ಲ. ಈ ಕೃತ್ಯವನ್ನು ಸಚಿವ ಜಮೀರ್ ಸಮರ್ಥನೆ ಮಾಡಿಕೊಂಡಿದ್ದು ತಪ್ಪು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶ್ರೀರಾಮ ಸೇನೆ ಸಂಘಟನೆಯಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಜಮೀರ್ ಅವರ ಚಾಮರಾಜಪೇಟೆ ಕ್ಷೇತ್ರ ತಾಲಿಬಾನ್ ರೀತಿ ಆಗಿದೆ. ಇಡೀ ಚಾಮರಾಜಪೇಟೆ ಬಾಂಗ್ಲಾದೇಶ ರೀತಿ ಆಗ್ತಿದೆ. ಇಲ್ಲಿ ಉರ್ದು ಮಾತ್ರ ಮಾತಾಡಿ ಅಂತಾರೆ, ಇಲ್ಲದಿದ್ದರೆ ಚಾಕು ಹಾಕ್ತಾರೆ. ಹಸುವಿನ ಕೆಚ್ಚಲು ಕೊಯ್ದು ಹಾಕ್ತಾರೆ, ಹಿಂದೂಗಳಿಗೆ ಕಲ್ಲು ಎಸೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇವೆಲ್ಲ ವರ್ತನೆ ನೋಡಿದ್ರೆ ತಾಲಿಬಾನ್ ಅಲ್ಲದೆ ಮತ್ತೇನು ಹೇಳಬೇಕು. ಎಲ್ಲೆಂದರಲ್ಲಿ ಗಾಂಜಾ ಸೇವನೆ, ಮಾರಾಟ ಜೋರಾಗಿ ನಡೆಯುತ್ತಿದೆ. ದೇವಾಲಯದ ಪಕ್ಕದಲ್ಲೇ ಮಾಂಸ ಮಾರಾಟ ಅಂಗಡಿಗಳಿವೆ. ಇದೆಲ್ಲವನ್ನು ತಡೆಯಲು ಜನವರಿ 25ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ, ಕನ್ನಡ ಬಾವುಟಕ್ಕೆ ಅಪಮಾನ | ಕನ್ನಡಿಗರ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ ಕಿಡಿಗೇಡಿ



















