ಮಂಡ್ಯ: ಕುಮಾರಸ್ವಾಮಿಗೆ ಯಾವ ಕೆಲಸವೂ ಇಲ್ಲ. ಬರೀ ಸಿಎಂ, ಡಿಸಿಎಂ ಅವರನ್ನು ಬೈಯ್ಯೋದೆ ಕಾಯಕ ಮಾಡಿಕೊಂಡಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಮುಂದೆ ಒಕ್ಕಲಿಗರು ಯಾರು ಬಿಳಿ ಬಟ್ಟೆ ಹಾಕುವ ಹಾಗಿಲ್ಲ. ಪಿಡಬ್ಲ್ಯೂಡಿ, ನೀರಾವರಿ ಇಲಾಖೆಗಳು ಅವರು ಮತ್ತು ಅವರ ಕುಟುಂಬದವರು ಮಾತ್ರ ಆಗಿರಬೇಕು. ಈಗ ಡಿ.ಕೆ ಶಿವಕುಮಾರ್ ಆಗಿದ್ದಾರೆ. ಅದಕ್ಕೆ ಅವರಿಗೆ ಹೊಟ್ಟೆ ಉರಿ ಎಂದು ವ್ಯಂಗ್ಯವಾಡಿದ್ದಾರೆ.
ಉಪಚುನಾವಣೆಯ ಪ್ರಚಾರದ ಸಮಯದಲ್ಲಿ ಮಗನ ಎಲೆಕ್ಷನ್ ಮುಂದಿಟ್ಟುಕೊಂಡು ಕುಮಾರಸ್ವಾಮಿ ಕಂಪನಿಗಳಿಂದ ರೋಲ್ ಕಾಲ್ ಮಾಡಿದ್ದಾರೆ. ನೂರಾರು ಕಂಪನಿಗಳಿಂದ ಸಾವಿರಾರು ಕೋಟಿ ಹಣ ಪಡೆದಿರುವುದು ಸತ್ಯ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಅವರು, ನನ್ನ ಮಗನ ಚುನಾವಣೆ ಅಂತ ಎಲ್ಲರಿಗೂ ಗಿಫ್ಟ್ ಕೊಟ್ಟಿದ್ದಾರೆ. ದುಡ್ಡು ಖರ್ಚು ಮಾಡಿದ ತಕ್ಷಣವೇ ಜನ ಓಟ್ ಕೊಡಬೇಕು ಅಂತ ಇಲ್ಲ. ಸುಮಲತಾ, ನಿಖಿಲ್ ಚುನಾವಣೆಯಲ್ಲಿ ಮಂಡ್ಯದಲ್ಲಿ ದುಡ್ಡು ಖರ್ಚಿನ ಬಗ್ಗೆ ಗೊತ್ತಿದೆ. ಜನರು ಎಲ್ಲದಕ್ಕೂ ಉತ್ತರ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.