ಅಪ್ಪಟ ಕನ್ನಡತಿ ಮಿಲ್ಕಿ ಬ್ಯೂಟಿ ಆಶಿಕ ರಂಗನಾಥ್ ಸೌಂದರ್ಯಕ್ಕೆ ಮಾರು ಹೋಗದವರು ಯಾರು ಇಲ್ಲ. ಪಡ್ಡೆ ಹುಡುಗರ ಹೃದಯ ಗೆದ್ದ ಚೆಲುವೆ ಈ ನಟಿ ಇದೀಗ ಪರಭಾಷೆಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಾ ಜನಪ್ರಿಯತೆ ಗಳಿಸುತ್ತಿದ್ದಾರೆ.
ಸೌತ್ ಇಂಡಸ್ಟ್ರಿಯಲ್ಲಿ ಕನ್ನಡದ ನಟಿಯರಿಗೆ ಅವಕಾಶ ಹೆಚ್ಚಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿ ಆಶಿಕಾ ರಂಗನಾಥ್ ಅವರಿಗೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈ ನಟಿ ಬಹುತೇಕ ಸಾರಿಯಲ್ಲಿ ಥೇಟ್ ಅಪ್ಸರೆಯಂತೆ ಕಾಣಿಸುತ್ತಾರೆ. ತನ್ನ ಬಿಡುವಿನ ಸಮಯದಲ್ಲಿ ವಿದೇಶ ಸುತ್ತುವ ಇವರು ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ಇನ್ನು ಆಶಿಕಾ ರಂಗನಾಥ್ ಗ್ಲಾಮರ್ ಗೆ ಅಭಿಮಾನಿಗಳ ವರ್ಗವೇ ಇದ್ದು, ಮಿಲ್ಕಿ ಬ್ಯೂಟಿ ತಾನಾಯಿತು ತನ್ನ ಸಿನಿಮಾ ಆಯ್ತು ಅಂತ ಸದಾ ಕೂಲ್ ಆಗಿ ಇರ್ತಾರೆ.
2018ರಲ್ಲಿ ತೆರೆಕಂಡ ಶರಣ್ ಮತ್ತು ಆಶಿಕಾ ಅಭಿನಯದ ರ್ಯಾಂಬೋ 2’ ಸಿನಿಮಾ ಅಭೂತಪೂರ್ವ ಪ್ರದರ್ಶನ ಕಂಡಿದ್ದಲ್ಲದೆ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯಿತು. ಈ ಚಿತ್ರದಚುಟು ಚುಟು’ ಹಾಡು ಯ್ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದಾಗಿ ದಾಖಲೆ ಬರೆದಿದೆ.
ಸ್ಯಾಂಡಲ್ವುಡ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನೇಕ ನಟಿಯರು ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಅವರಲ್ಲಿ ನಟಿ ಆಶಿಕಾ ಕೂಡ ಇಬ್ಬರಾಗಿದ್ದಾರೆ. ಆಶಿಕಾ ಸದ್ಯ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.ಸಿದ್ಧಾರ್ಥ್ ಮತ್ತು ಕನ್ನಡತಿ ಆಶಿಕಾ ರಂಗನಾಥ್ ಅವರ ತಮಿಳು ಚಲನಚಿತ್ರ ಮಿಸ್ ಯೂ ರೊಮ್ಯಾಂಟಿಕ್ ಸಿನಿಮಾ. ಕಳೆದ ವರ್ಷ ಡಿಸೆಂಬರ್ 13 ರಂದು ಸಿನಿಮಾ ತೆರೆ ಕಂಡಿತ್ತು. ಮಿಸ್ ಯೂ ಎನ್ನುವುದು ತಮಿಳಿನ ರೋಮ್ಯಾಂಟಿಕ್ ಹಾಸ್ಯ ಸಿನಿಮಾ. ರಾಜಶೇಖರ್ ಎನ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸಿದ್ದಾರ್ಥ್ ನಾರಾಯಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ.