ಬೆಂಗಳೂರು: ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ತಪ್ಪುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆಗಳೆಲ್ಲ ಪರಿಷ್ಕರಣೆಯಾಗಿದ್ದು, ಗಗನಕ್ಕೆ ಬೆಲೆ ಏರಿಕೆಯಾಗಿವೆ. ಇತ್ತೀಚೆಗಷ್ಟೇ ಹಾಲಿನ ದರ ಏರಿಕೆ ಮಾಡಲಾಗಿತ್ತು, ಈಗ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರ (State Government) ಹಾಲಿನ ದರ ಏರಿಕೆಯಲ್ಲಿ ಈಗ ಮತ್ತೆ ಜನರಿಗೆ ಶಾಕ್ ನೀಡಲು ಮುಂದಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಹಾಲು, ಮೊಸರಿನ ಬೆಲೆಯನ್ನು ಸರ್ಕಾರ ಲೀಟರ್‌ಗೆ 4 ರೂ. ಏರಿಕೆ ಮಾಡಿತ್ತು. ಈಗ ಮತ್ತೆ ಹಾಲಿನ ದರ ಏರಿಕೆಯ ಚರ್ಚೆ ಶುರುವಾಗಿದ್ದು, ಗ್ರಾಹಕರು ಆತಂಕ ಪಡುವಂತಾಗಿದೆ.
ಇದೇ ತಿಂಗಳು 25ಕ್ಕೆ ಹೊಸ ನಿರ್ದೇಶಕರ ಆಯ್ಕೆ ಆಗಲಿದೆ. ಹೊಸ ಆಡಳಿತ ಮಂಡಳಿ ರಚನೆಯಾದ ನಂತರ ಖರ್ಚು-ವೆಚ್ಚಗಳ ಆಧಾರದ ಮೇಲೆ ಸರ್ಕಾರಕ್ಕೆ ಮತ್ತೆ ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎದೆ ಎನ್ನಲಾಗುತ್ತಿದೆ.