ಬಹುಭಾಷಾ ನಟಿ ಸರೋಜಾದೇವಿ ಅವರ ಅಂತ್ಯಕ್ರಿಯೆ ನಿನ್ನೆ ಅವರ ಹುಟ್ಟೂರು ದಶಾವಾರದಲ್ಲಿ ಇರುವ ಅವರ ತಾಯಿ ರುದ್ರಮ್ಮ ಅವರ ಸಮಾಧಿಯ ಪಕ್ಕದಲ್ಲೇ ನಡೆದಿದ್ದು, ಇಂದು ಮಗ ಗೌತಮ್ ಸೇರಿ ಕುಟುಂಬಸ್ಥರು ಸರೋಜಾದೇವಿ ಅವರ ಸಮಾದಿಗೆ ಪೂಜೆ ಸಲ್ಲಿಸಿದ್ದಾರೆ.
ದಶವಾರದ ಸರೋಜಾದೇವಿ ಗಾರ್ಡನ್ ನಲ್ಲಿರುವ ಸಮಾಧಿಗೆ ಅವರ ಕುಟುಂಬಸ್ಥರು 3 ನೇ ದಿನದ ಹಾಲುತುಪ್ಪ ಕಾರ್ಯ ನೆರವೇರಿಸಿದರು. ಮಾತ್ರವಲ್ಲದೇ, ಸಮಾಧಿಗೆ ಹೂವುಹಣ್ಣು, ತಿಂಡಿತಿನಿಸು ಎಡೆ ಇಟ್ಟು ಪೂಜೆ ಸಲ್ಲಿಸಿದರು.


















