ನವದೆಹಲಿ: ಮಧ್ಯಪ್ರಾಚ್ಯ ಯುದ್ಧ 23ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಸಂಕಷ್ಟ ತಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಹೊರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ತೈಲ, ಅನಿಲಕ್ಕೆ ಹಾಹಾಕಾರ ಎದ್ದಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಹೊರ್ಮುಜ್ ಜಲಸಂಧಿ (Strait of Hormuz) ಬಂದ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಇರಾನ್ ವಿರೋಧಿಗಳಿಗೆ ಮಾತ್ರ ಹೊರ್ಮುಜ್ ಬಂದ್ ಆಗಿದೆ ಎಂದಿದೆ. ವಿರೋಧಿಗಳಿಗೆ ಬಂದ್ ಮಾಡಿರೋ ಕಾರಣ ಜಗತ್ತಿನಾದ್ಯಂತ ತೈಲ, ಅನಿಲಕ್ಕೆ ಹಾಹಾಕಾರ ಉಂಟಾಗಿದೆ. ಹೀಗಾಗಿ ಇಂಧನ ಪೂರೈಕೆಯನ್ನು (Energy Supply) ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ಆರೋಗ್ಯ ಸಚಿವ ಜೆ.ಪಿ ನಡ್ಡಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (Natural Gas) ಸಚಿವ ಹರ್ದೀಪ್ ಸಿಂಗ್ ಪುರಿ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಇತರ ಹಿರಿಯ ಸಚಿವರು ಮತ್ತು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಪೆಟ್ರೋಲಿಯಂ, ಕಚ್ಚಾ ತೈಲ, ಅನಿಲ, ವಿದ್ಯುತ್ ಮತ್ತು ರಸಗೊಬ್ಬರ ವಲಯಗಳ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ತೈಲ, ಅನಿಲ ಮತ್ತು ರಸಗೊಬ್ಬರಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ನಿರಂತರ ಪೂರೈಕೆ ಕಾಯ್ದುಕೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ.
ಅಧಿಕಾರಿಗಳು ಕೆಲವು ವಿಷಯಗಳನ್ನು ಸಭೆಯ ಮುಂದೆ ತಂದರು. ಸದ್ಯದ ಸ್ಟಾಕ್ ಮಟ್ಟಗಳು, ಆಮದು ಅವಲಂಬನೆಗಳು ಮತ್ತು ಸಂಭಾವ್ಯ ಅಡಚಣೆಗಳನ್ನು ನಿಭಾಯಿಸಲು ಇರುವ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಲ್ಲಿ, ಜಾಗತಿಕ ಏರಿಳಿತದ ಹೊರತಾಗಿಯೂ ಇಂಧನ ಬೆಲೆಗಳು ಹೆಚ್ಚಾಗಿ ಬದಲಾಗದೆ ಉಳಿದಿವೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 103 ರೂ. ಮತ್ತು ಡೀಸೆಲ್ 90 ರೂ.ನ ಆಸುಪಾಸಿನಲ್ಲಿದೆ ಎಂಬ ಅಂಶ ಕೂಡ ಚರ್ಚೆಯಲ್ಲಿ ಬಂದಿತು.
ಒಂದು ದಿನದ ಹಿಂದಷ್ಟೇ ಕೇಂದ್ರ ಸರ್ಕಾರ ಹೋಟೆಲ್‌ಗಳಿಗೆ ಗುಡ್‌ನ್ಯೂಸ್ ನೀಡಿದೆ. ಕೇಂದ್ರದಿಂದ ರಾಜ್ಯಗಳಿಗೆ ಶೇ. 20ರಷ್ಟು ಗ್ಯಾಸ್ ಸಿಲಿಂಡರ್ ಹೆಚ್ಚುವರಿ ಬರುತ್ತದೆ. ಹೋಟೆಲ್, ಡಾಬಾ, ರೆಸ್ಟೋರೆಂಟ್, ಇಂಡಸ್ಟ್ರಿಯಲ್ ಕ್ಯಾಂಟಿನ್, ಡೈರಿ, ಕಮ್ಯುನಿಟಿ ಕಿಚನ್‌ಗೆ ಸಿಲಿಂಡರ್ ಸರಬರಾಜು ಆಗಲಿದ್ದು, ಎರಡು ವಾರಗಳಿಂದ ಪರದಾಡುತ್ತಿರುವ ಸಮಸ್ಯೆಗೆ ಸ್ವಲ್ಪ ಮುಲಾಮು ಸಿಕ್ಕಂತಾಗುತ್ತಿದೆ.
ಇದನ್ನೂ ಓದಿ : ಇರಾನ್ ತೈಲ ಆಮದು ಹಾದಿ ಸುಗಮ : ಅಮೆರಿಕ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಖರೀದಿಗೆ ಭಾರತೀಯ ಕಂಪನಿಗಳ ಸಜ್ಜು



















