ಹಾಸನ: ಮೈಕ್ರೋ ಫೈನಾನ್ಸ್ ನಿಂದ ರೈತ ಮಹಿಳೆಯೊಬ್ಬರ ಮನೆ ಜಪ್ತಿ ಮಾಡಿ, ಮನೆಯಿಂದ ಆಚೆ ಹಾಕಲಾಗಿತ್ತು. ರೈತ ಸಂಘದ ಮುಖಂಡರ ದಿಟ್ಟ ಹೆಜ್ಜೆಯಿಂದ ಒಂಟಿ ಮಹಿಳೆ ಮತ್ತೆ ಗೂಡು ಸೇರಿದ್ದಾಳೆ.
ಹಾಸನದ ಬಡ ಮಹಿಳೆ ಕುಟುಂಬವು ಖಾಸಗಿ ಪೈನಾನ್ಸ್ ನಿಂದ ಮನೆಗಾಗಿ 3.50 ಲಕ್ಷ ಸಾಲ ಮಾಡಿದ್ದರು, ಇತ್ತೀಚಿಗಷ್ಟೆ ಗಂಡನನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಕ್ಕಿದ್ದ ಮಹಿಳೆಗೆ ಫೈನಾನ್ಸ್ ಕಂಪನಿಯವರು ಮನೆಯ ಬೀಗ ಹಾಕಿ ಮತ್ತಷ್ಟು ಅಘಾತ ನೀಡಿದ್ದರು.
ಅಲ್ಲದೆ, ಈ ಕ್ವಿಟಾಸ್ ಫೈನಾನ್ಸ್ ಕಂಪನಿಯವರು ರೈತ ಮಹಿಳೆಗೆ ಹಿಂಸೆ ನೀಡಿರುವ ಆರೋಪ ಸಹ ಕೇಳಿ ಬಂದಿದೆ. 3.80 ಲಕ್ಷಕ್ಕೆ ಈಗಾಗಲೇ 7.50 ಲಕ್ಷ ಸಾಲ ಕಟ್ಟಿರೋದಾಗಿ ರೈತ ಮಹಿಳೆ ಮಂಜುಳಾ ಹೇಳುತ್ತಿದ್ದಾಳೆ. ಆದರೆ ಫೈನಾನ್ಸ್ ಸಿಬ್ಬಂದಿ ಏಕಾಏಕಿ ಬಂದು ಉಳಿದ ಕಂತು ಕಟ್ಟುವಂತೆ ಮಹಿಳೆ ವಾಸದ ಮನೆಗೆ ಕೋರ್ಟ್ ಆದೇಶ ತಂದು ಬೀಗ ಜಡಿದಿದ್ದಾರೆ.
ಒಂಟಿ ಮಹಿಳೆಯ ಸ್ಥಿತಿ ಕಂಡು ಮಹಿಳೆ ಬೆನ್ನಿಗೆ ನಿಂತ ಹಾಸನದ ರೈತ ಸಂಘದ ಮುಖಂಡರಾದ ಕಣಗಾಲ್ ಮೂರ್ತಿ ಮತ್ತಿತರರು ಯಾವುದೇ ಕೇಸ್ ನಮ್ಮ ಮೇಲೆ ಬಿದ್ದರೂ ಪರ್ವಾಗಿಲ್ಲ ಇದು ಪೈನಾನ್ಸ್ ಕಂಪನಿ ಷೋಷಣೆ ಎಂದು ಫೈನಾನ್ಸ್ ಕಂಪನಿ ಹಾಕಿದ್ದ ಮನೆ ಬೀಗ ಒಡೆದು ಮಹಿಳೆಯನ್ನು ಮನೆ ಸೇರಿಸಿದ್ದಾರೆ.
ಇದನ್ನೂ ಓದಿ : ವಿಜಯ್ ಹಜಾರೆ ಸಮರ : ಕರ್ನಾಟಕ ತಂಡಕ್ಕೆ ರಾಹುಲ್, ಪ್ರಸಿದ್ಧ್ ಕೃಷ್ಣ ಆನೆಬಲ



















