ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಊರು ತೊರೆದಿದ್ದಾರೆ.
ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಕೆಲವಾರು ಕುಟುಂಬಗಳು ಆತಂಕದಲ್ಲೇ ಪ್ರತಿ ದಿನ ಕಾಲ ಕಳೆಯುವಂತಾಗಿದೆ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.
ಈಗ ಸುಗ್ರೀವಾಜ್ಞೆ ಡ್ರಾಫ್ಟ್ ರಾಜ್ಯಪಾಲರಿಗೆ ರವಾನೆಯಾಗಿದೆ. ಶಿಕ್ಷೆಯ ಪ್ರಮಾಣದಲ್ಲಿ ಬದಲಾವಣೆ ಮಾಡಿ ಸುಗ್ರೀವಾಜ್ಞೆಯನ್ನು ರವಾನಿಸಲಾಗಿದೆ. ಕಿರುಕುಳ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ 3 ವರ್ಷದ ಶಿಕ್ಷೆಯ ಬದಲು 10 ವರ್ಷದವರೆಗೆ ಜೈಲು ಶಿಕ್ಷೆಗೆ ಒಳಪಡಿಸಲು ಡ್ರಾಫ್ಟ್ ನಲ್ಲಿ ಬದಲಾಣೆ ಮಾಡಲಾಗಿದೆ. ಹೀಗಾಗಿ ಈಗ ರಾಜ್ಯಪಾಲರ ಅಂಕಿತದ ಬಳಿಕ ಸುಗ್ರೀವಾಜ್ಞೆ ಹೊರ ಬೀಳಲಿದೆ.