ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (micro finance) ಕಿರುಕುಳ ಹೆಚ್ಚಾಗುತ್ತಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವೆಡೆ ಜನರು ಊರು ತೊರೆದಿದ್ದಾರೆ. ಹೀಗಾಗಿ ಸರ್ಕಾರ ಈ ಕುರಿತು ಸಭೆ ನಡೆಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜ. 25ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.
ಬಡ ಮತ್ತು ಮದ್ಯಮ ವರ್ಗದ ಜನರು ಕಷ್ಟ ಕಾಲಕ್ಕೆ ಬೇಕೆಂದು ಹಣ ಪಡೆದು ಶೋಷಣೆಗೆ ಒಳಗಾಗುತ್ತಿದ್ದಾರೆ. ಇಂತಹ ಜನರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ನೀಡುತ್ತಿದೆ. ಹೀಗಾಗಿ ಜನರು ಈಗ ದೂರು ನೀಡುತ್ತಿದ್ದಾರೆ.
ಈಗಾಗಲೇ ಮೈಕ್ರೋ ಫೈನಾನ್ಸ್ ವಿರುದ್ಧ ಬೆಳಗಾವಿ-2,71,466, ಬಾಗಲಕೋಟೆ- 89,037, ವಿಜಯಪುರ-75,000, ಮಂಡ್ಯ- 42,500, ಗದಗ-41,116, ಧಾರವಾಡ-36,489, ರಾಮನಗರ- 33,326, ಶಿವಮೊಗ್ಗ-25,525, ಹಾಸನ- 24.556 ಮತ್ತು ಚಿಕ್ಕಬಳ್ಳಾಪುರ-22,054 ದೂರು ದಾಖಲಾಗಿವೆ. ಹಲೆವೆಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಗಳಿಗೆ ತೆರಳಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಹೀಗಾಗಿ ಸರ್ಕಾರದ ಮೊರೆ ಹೋಗಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಭೆ ಕರೆದಿದ್ದು, ಕಠಿಣ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ.