ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೆ ಮೀಟರ್ ಬಡ್ಡಿ ದಂಧೆ ನಡೆಯುತ್ತಿದ್ದು, ಬಡ ಜೀವಗಳು ಹೈರಾಣಾಗುತ್ತಿವೆ. ನಗರದಲ್ಲಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ತಾಯಿ,(mother) ಮಗಳು (doughter)ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಇವರಿಬ್ಬರ ಕಾಟಕ್ಕೆ ಬಡವರು ನಲುಗಿ ಹೋಗುತ್ತಿದ್ದಾರೆ. ರಾಜಕೀಯ ನಾಯಕರ ಜೊತೆ ಗುರುತಿಸಿಕೊಂಡಿರುವ ಈ ಲೇಡಿ ಡಾನ್(Lady Don) ಗಳು ವಾರದ ಲೆಕ್ಕದಲ್ಲಿ ಶೇ. 45ರಂತೆ ಬಡ್ಡಿ ಪಡೆಯುತ್ತಾರೆ.
ವ್ಯಕ್ತಿಯೊಬ್ಬರು ಮನೆ ಲೀಜ್ ಗೆ ಹಾಕಿ ಹಣ ಕೊಟ್ಟರೂ ಇವರ ಬಡ್ಡಿ ದಾಹ ಇನ್ನೂ ತೀರಿಲ್ಲವಂತೆ. ಈ ಲೇಡಿ ಡಾನ್ ಗಳು ಬಡ್ಡಿ ಕಟ್ಟುವಂತೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇವರು 45 ಸಾವಿರ ರೂ. ಹಣ ನೀಡಿ, ಅದಕ್ಕೆ ಬರೋಬ್ಬರಿ 3 ಲಕ್ಷ 45 ಸಾವಿರ ರೂ. ಹಣ ಪಡೆದಿದ್ದಾರೆ. ತಾಹೀರ್ ಖಾರಾಮ್ ಎಂಬುವವರ ಜೀವವನ್ನು ತಾಯಿ- ಮಗಳು ಈ ರೀತಿ ಹಿಂಡಿದ್ದಾರೆ.
ತಾಹೀರ್ ಖಾರಾಮ್ 2022 ರಲ್ಲಿ 45 ಸಾವಿರ ರೂ. ಹಣ ಪಡೆದಿದ್ದರು. ಇಲ್ಲಿಯವರೆಗೆ ಸುಮಾರು 3 ಲಕ್ಷ 45 ಸಾವಿರ ಹಣ ಕಟ್ಟಿದ್ದಾರೆ. ಇಷ್ಟು ಬಡ್ಡಿ ಹಣ ನೀಡಿದರೂ ಮತ್ತೆ ನೀಡುವಂತೆ ಮನೆಯ ಹತ್ತಿರ ಹುಡುಗರನ್ನು ಕಳುಹಿಸಿ ದಾಂಧಲೆ ಮಾಡಿಸಿದ್ದಾರೆ ಎನ್ನಲಾಗಿದೆ.
ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಲೇಡಿ ಡಾನ್ ಮುಂದಾಗಿದ್ದಾರೆ. ಇದರಿಂದ ಭಯಭೀತರಾದ ತಾಹೀರ್, ಪ್ರಜ್ಞೆ ತಪ್ಪಿಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಂದ್ರಲೇಔಟ್ ನ (Chandra Layout) ಕಮಲನಗರದ ಮುಮ್ತಾಜ್, ಸೀಮಾ ಮೀಟರ್ ಬಡ್ಡಿ ನಡೆಸುವ ತಾಯಿ ಹಾಗೂ ಮಗಳು ಎಂದು ಗುರುತಿಸಲಾಗಿದೆ. ಈ ಲೇಡಿ ಡಾನ್ ಗಳು ಸ್ಥಳೀಯ ಕಾಂಗ್ರೆಸ್ ಶಾಸಕರ ಜೊತೆ ಗುರುತಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಡಾನ್ ಗಳು, ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ಮೀಟರ್ ಬಡ್ಡಿ ಬಿಟ್ಟು ಜನರನ್ನು ಹೆದರಿಸುತ್ತ ಜೀವನ ಸಾಗಿಸುತ್ತಿದ್ದಾರೆ. ಪೋನ್ ಮಾಡಿ ಉರ್ದು ಭಾಷೆಯಲ್ಲಿ ಅಶ್ಲೀಲವಾಗಿ ಬೈದು ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಈಗ ನೊಂದ ಮಹಿಳೆ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.